ಕೊಲೆಗೀಡಾದ ಶಿಕ್ಷಕ  
ಜಿಲ್ಲೆ

ಶಿಕ್ಷಕನ ಮರ್ಮಾಂಗವನ್ನೇ ಕತ್ತರಿಸಿ ಬರ್ಬರ ಕೊಲೆ; ಭೀಕರ ಹತ್ಯೆಗೆ ಕಾರಣವಿನ್ನೂ ನಿಗೂಢ..

ಬೀದರ್​: ಪ್ರಾಥಮಿಕ ಶಾಲೆಯೊಂದರ ಶಿಕ್ಷಕನ ಮರ್ಮಾಂಗವನ್ನೇ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೀದರ್ ಜಿಲ್ಲೆಯ ಔರಾದ್​ನಲ್ಲಿನ ಲಿಡ್ಕರ್​ ಕಾಲನಿ ನಿವಾಸಿಯಾಗಿದ್ದ ವಿಜಯಕುಮಾರ್ ಟೀಳೆಕರ್ (46) ಕೊಲೆಗೀಡಾದ ಶಿಕ್ಷಕ.

ಬೀದರ್​ನ ಔರಾದ್​ ಪಟ್ಟಣದಲ್ಲೇ ಇಂದು ಈ ಭೀಕರ ಕೊಲೆ ನಡೆದಿದೆ. ಔರಾದ್​ನಲ್ಲಿನ ಕರಂಜಿ(ಕೆ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಜಯಕುಮಾರ್​ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮರ್ಮಾಂಗವನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ ಎಸ್​ಪಿ ಡಿ.ಎಲ್​.ನಾಗೇಶ್, ಎಎಸ್​​ಪಿ ಪೃಥ್ವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆ ಮಾಡಿರುವುದು ಯಾರು, ಕೊಲೆಗೆ ಕಾರಣ ಏನು ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ಖಚಿತಗೊಳ್ಳಬೇಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಔರಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.