ಪೂರ್ವಭಾವಿ ಸಭೆಯಲ್ಲಿ ಶಾಲಾ ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಾತನಾಡಿದರು.  
ಜಿಲ್ಲೆ

ಶಾಲಾ ಶತಮಾನೋತ್ಸವದ ಪೂರ್ವಭಾವಿ ಸಭೆ

Karthika K.S

ಶಿರ್ವ: ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಶಾಲಾ ಸಭಾಂಗಣದಲ್ಲಿ ಹಿರಿಯ ವಿದ್ಯಾರ್ಥಿಗಳು ಮತ್ತು ಶಾಲಾಭಿಮಾನಿಗಳ ಪೂರ್ವಭಾವಿ ಸಭೆ ಜರುಗಿತು. ಬಂಟಕಲ್ಲು ದುರ್ಗಾಪರಮೆಶ್ವರಿ ದೇವಳ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದಬೈಲು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಹಾಗೂ ಹಿರಿಯ ವಿದ್ಯಾರ್ಥಿ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾಗಿ ಹಿರಿಯ ವಿದ್ಯಾರ್ಥಿ ಮಾಧಮ ಕಾಮತ್ ಬಂಟಕಲ್ಲು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕೆ.ಆರ್.ಪಾಟ್ಕರ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹಿರಿಯ ವಿದ್ಯಾರ್ಥಿಗಳಾದ ಬಂಟಕಲ್ಲು ರಾಮಕೃಷ್ಣ ಶರ್ಮಾ, ನಿವೃತ್ತ ಮುಖ್ಯ ಶಿಕ್ಷಕ ಎನ್.ರಾಧಾಕೃಷ್ಣ ಪ್ರಭು, ದಿನೇಶ್ ದೇವಾಡಿಗ ಹೇರೂರು, ದಾಮೋದರ ಆಚಾರ್ಯ, ರಮಾನಾಥ ಪಾಟ್ಕರ್, ಶಾಲಾ ಸಂಚಾಲಕ ರಾಮದಾಸ್ ಪ್ರಭು, ಹಿರಿಯರಾದ ಭಾಸ್ಕರ್ ಶೆಟ್ಟಿ ಸಡಂಬೈಲು, ಉದ್ಯಮಿ ರಾಮಚಂದ್ರ ನಾಯಕ್ ಪಡುಬೆಳ್ಳೆ, ಶಾಲಾ ಮುಖ್ಯಶಿಕ್ಷಕಿ ಸಂಗೀತಾ ಪಾಟ್ಕರ್, ನಿವೃತ್ತ ಶಿಕ್ಷಕಿ ಜಯಂತಿ, ಅನಸೂಯಾ ಬಾ,ಕೆ, ಹಿಲ್ಡಾ ಮತಾಯಸ್, ನಾರಾಯಣ ಪ್ರಭು ಕೋಡುಗುಡ್ಡೆ, ಪದ್ಮನಾಭ ಭಟ್ ಸಾಲ್ಮರ, ದೇವಳ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್ ಪ್ರಭು ಪಾಲಮೆ, ಡಾ.ಹರೀಶ್ ಆರ್ ನಾಯಕ್, ಆಡಳಿತ ಮಂಡಳಿ ಸದಸ್ಯರು, ಶಾಲಾ ಹಿರಿಯ ವಿದ್ಯಾರ್ಥಿಗಳು, ಅಭಿಮಾನಿಗಳು ಉಪಸ್ಥಿತರಿದ್ದರು. ಶಾಲಾ ಮಾಜಿ ಸಂಚಾಲಕ ಶಶಿಧರ ವಾಗ್ಲೆ ಸ್ವಾಗತಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ವಂದಿಸಿದರು. ದೇವದಾಸ್ ಪಾಟ್ಕರ್ ನಿರೂಪಿಸಿದರು.