ಬಂಟ್ವಾಳ: ಕಳ್ಳಿಗೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿದಿಯಲ್ಲಿ ಔಷಧೀಯ ಗುಣವುಳ್ಳ ಸಸಿಗಳನ್ನು ವಿತರಣೆ ಮಾಡುವ ಸಸ್ಯನಾರಾಯಣ ಕಾರ್ಯಕ್ರಮ ಶನಿವಾರ ನಡೆಯಿತು.
ಕ್ಷೇತ್ರದ ಸಂಚಾಲಕ ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸದಾಶಿವ ಡಿ.ತುಂಬೆ ಹಾಗೂ ಮನೋಜ್ ಕನಪಾಡಿ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟಿ ತಾರಾನಾಥ ಕೊಟ್ಟಾರಿ ಮಾಹಿತಿ ನೀಡಿದರು.
ಲಯನ್ಸ್ ಜಿಲ್ಲಾ ಸಂಪರ್ಕಧಿಕಾರಿ ಸುದರ್ಶನ್ ಪಡಿಯಾರ್, ಹಸಿರು ದಳದ ನಾಗರಾಜ್ ಬಜಾಲ್, ಪರಿಸರ ಪ್ರೇಮಿ ದಾಮೋದರ ಸಂಚಯಗಿರಿ, ಕಳ್ಳಿಗೆ ಪಿಡಿಒ ಶಿವುಲಾಲ್ ಚೌಹಾಣ್, ಸೇವಾ ಸಮಿತಿ ಅಧ್ಯಕ್ಷ ಯಶವಂತ ಮುಂಡಾಜೆ ಉಪಸ್ಥಿತರಿದ್ದರು.
ಶ್ರೀನಾಥ್ ಗುಂಡಿಬೆಟ್ಟು ಸ್ವಾಗತಿಸಿದರು. ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಜ್ಯೋತಿಗುಡ್ಡೆ ನಿರೂಪಿಸಿದರು. ಬೆಳಿಗ್ಗೆ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.