ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಇತ್ತೀಗೆ ನಡೆಯಿತು.  
ಜಿಲ್ಲೆ

ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ಪಶುಆಹಾರ ಬಳಕೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಹಾಲಿಗೆ ವೈಜ್ಞಾನಿಕ ದರ ನಿಗದಿ ಮಾಡಿದರೆ ಮಾತ್ರ ಹೈನುಗಾರಿಕೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪಶು ಆಹಾರದ ಬಳಕೆಯಾಗುತ್ತಿದೆ ಎಂದು ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಹೇಳಿದರು.

ಸಾಣೂರು ಸುವರ್ಣ ಗ್ರಾಮೋದಯ ಸೌಧದ ಸಭಾಭವನದಲ್ಲಿ ಇತ್ತೀಚೆಗೆ ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿರ್ದೇಶಕ ಜಯ ಶೆಟ್ಟಿಗಾರ್ ವಾರ್ಷಿಕ ವರದಿ ಮಂಡಿಸಿದರು. ಸೋಮಶೇಖರ್ 2024-25ನೇ ಸಾಲಿನ ಕಾರ್ಯಯೋಜನೆಗಳ ವಿವರ ನೀಡಿದರು. ರಾಯಲ್ ನೊರನ್ನಾ ಆಡಳಿತ ಮಂಡಳಿ ಸದಸ್ಯರ ಪದಾಧಿಕಾರಿಗಳ ಮತ್ತು ನೌಕರರ ನೀತಿ ಸಂಹಿತೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಸಂತೋಷ ಶೆಟ್ಟಿ ಅಂದಾಜು ಆಯ-ವ್ಯಯ ಮಂಡಿಸಿದರು. ಸಂಘದ ಸ್ಥಾಪಕ ಅಧ್ಯಕ್ಷ ಕೊರಗಶೆಟ್ಟಿ, ಮಾಜಿ ಅಧ್ಯಕ್ಷ ಶ್ರೀಧರ ಸಮಗಾರ ನಿರ್ದೇಶಕ ಜಯಮೂಲ್ಯ, ವಿಶ್ವನಾಥ ಶೆಟ್ಟಿಗಾರ್, ಸಂಜೀವಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಯಶೋದಾ ಆರ್.ಸುವರ್ಣ ಸ್ವಾಗತಿಸಿದರು. ಹಾಲು ಪರೀಕ್ಷಕಿ ಪ್ರಮೀಳಾ ವಂದಿಸಿದರು. ನಿರ್ದೇಶಕ ಪ್ರವೀಣ ಶೆಟ್ಟಿ ನಿರೂಪಿಸಿದರು.

ಗರಿಷ್ಠ ಹಾಲು ಪೂರೈಕೆದಾರರಿಗೆ ಪುರಸ್ಕಾರ

ಸಂಘಕ್ಕೆ ಗರಿಷ್ಠ ಹಾಲು ಪೂರೈಸಿದ ಮಾಲತಿ, ರಾಯಲ್, ಡಾ.ನಾಗರತ್ನ, ಶ್ರೀಧರ ಸಮಗಾರ, ರಘುರಾಮ್ ಪೂಜಾರಿ, ಪ್ರೇಮಾಶೆಟ್ಟಿ, ಸೋಮಶೇಖರ ರಾವ್, ಲಿಯೋನಿಲ್ಲಾ ಡಿಸೋಜ, ಶಾಮಲಾ, ಜಾನಪ್ಪ ಮೂಲ್ಯ ಅವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಜತೆಗೆ ಗುಣಮಟ್ಟದ ಹಾಲನ್ನು ಪೂರೈಸಿದ ಸೈಮನ್ ಪಿಂಟೋ, ಜಯಾನಂದ ಮೂಲ್ಯ, ಶ್ರೀವಾಸು ಶೆಟ್ಟಿಯ ಅವರಿಗೆ ಗೌರವ ಪುರಸ್ಕಾರ ನೀಡಲಾಯಿತು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳ ಪಡೆದ ಸಂಘದ ಸದಸ್ಯರ ಮಕ್ಕಳಾದ ಪ್ರಜ್ಞಾ ಅಮೂಲ್ಯ, ಲಕ್ಷ್ಮಿತಾ ಡಿ ಕುಲಾಲ್, ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಅನನ್ಯ ಪೂಜಾರಿ, ನಿಖಿಲ್ ಡಿಸೋಜ, ಆನಿ ಅಮೃತಾ ಡಿ’ಸೋಜ ಅವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.