ಜಿಲ್ಲೆ

ನಿಮ್ಮ ಒಂದು ಸಹಿ ಚಾಮುಂಡಿ ಬೆಟ್ಟವನ್ನು ಉಳಿಸಬಹುದು: ದಯವಿಟ್ಟು ಕೈಜೋಡಿಸಿ ಎಂದ ಯದುವೀರ್‌ ಒಡೆಯರ್‌

suchetana

ಮೈಸೂರು: ಮಿತಿ ಮೀರಿರುವ ಅಭಿವೃದ್ಧಿ ಕಾರ್ಯದಿಂದಾಗಿ ನಶಿಸಿಹೋಗುವ ಹಂತದಲ್ಲಿರುವ ಚಾಮುಂಡಿ ಬೆಟ್ಟವನ್ನು ಉಳಿಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ ಎಂದಿರುವ ಯದುವೀರ್ ಒಡೆಯರ್, ಚಾಮುಂಡಿ ಬೆಟ್ಟ ಉಳಿಸಿ ಅಭಿಯಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

ನಿರಂತರ ಮಳೆಯಿಂದಾಗಿ ಚಾಮುಂಡಿ ಬೆಟ್ಟ ಕುಸಿಯುತ್ತಿದೆ. ಈ ನಡುವೆ ಸರ್ಕಾರ ಕಾಮಗಾರಿ ಮಾಡಲು ಹೊರಟಿದೆ. ಇದರಿಂದ ಐತಿಹಾಸಿಕ ಬೆಟ್ಟಕ್ಕೆ ಹಾನಿಯಾಗಬಹುದು ಎಂಬ ಕಳಕಳಿ ಯದುವೀರ್‌ ಅವರದ್ದು. ಆದ್ದರಿಂದ ಅವರು ಈಗ ಜನರಿಗೆ ಮನವಿ ಮಾಡಿದ್ದಾರೆ.

ನಿಮ್ಮ ಒಂದು ಸಹಿ ಚಾಮುಂಡಿ ಬೆಟ್ಟವನ್ನು ಉಳಿಸಬಹುದು. ಮೈಸೂರಿನ ಮುಕುಟಪ್ರಾಯದಂತಿರುವ ಚಾಮುಂಡಿ ಬೆಟ್ಟವನ್ನು ಭವಿಷ್ಯದ ಮೈಸೂರಿನ ಸುರಕ್ಷತೆಗಾಗಿಯಾದರೂ ಉಳಿಸಿ ಎಂದು ಜಾಲತಾಣದಲ್ಲಿ ಯದುವೀರ್‌ ಹೇಳಿದ್ದಾರೆ. ಬೆಟ್ಟದಲ್ಲಿ ಪರಿಸರ ಸಮತೋಲನ ಕಾಪಾಡಿಕೊಳ್ಳಬೇಕು. ಈ ಸಹಿ ಆಂದೋಲನಕ್ಕೆ ನಾನು ಕೈಜೋಡಿಸಿದ್ದೇನೆ. ನೀವೂ ಕೈಜೋಡಿಸಿ ಎಂದು ಅವರು ಹೇಳಿದ್ದಾರೆ.

ಈ ಅಭಿಮಾನಕ್ಕೆ ಇದಾಗಲೇ ಮೈಸೂರು ಗ್ರಾಹಕರ ಪರಿಷತ್ ಸೇರಿದಂತೆ ಮೈಸೂರಿನ ಹಲವು ಸಂಘಟನೆಗಳು ಕೈಜೋಡಿಸಿವೆ. ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ‘ಸೇವ್ ಚಾಮುಂಡಿ ಮೂಮೆಂಟ್’ ಎಂಬ ಹೆಸರಿನಲ್ಲಿ ಚಾಮುಂಡಿ ಬೆಟ್ಟ ಉಳಿಸಿ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಂಬಲ ಸೂಚಿಸಿದ್ದಾರೆ.