ಜಿಲ್ಲೆ

VIDEO: ಕೃಷ್ಣಾ ಸೇತುವೆ ಮೇಲೆ ಧಗಧಗನೆ ಹೊತ್ತಿ ಉರಿಯಿತು ಚಲಿಸುತ್ತಿರುವ ಡೀಸೆಲ್‌ ಟ್ಯಾಂಕರ್‌!

ರಾಯಚೂರು: ಕರ್ನಾಟಕ- ತೆಲಂಗಾಣ ಗಡಿಯಲ್ಲಿರುವ ಶಕ್ತಿನಗರದ ಕೃಷ್ಣಾ ಸೇತುವೆಯ ಮೇಲೆ ಶನಿವಾರ ತಡರಾತ್ರಿ ಭಾರಿ ಅನಾಹುತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಡೀಸೆಲ್​ ಟ್ಯಾಂಕರ್​ವೊಂದಕ್ಕೆ ಬೆಂಕಿ ಹೊತ್ತಿಕೊಂಡು ಧಗ ಧಗನೆ ಹೊತ್ತಿ ಉರಿದಿದೆ.

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ಈ ಘಟನೆ ಸಂಭವಿಸಿದೆ. ಟ್ಯಾಂಕರ್‌ ಚಲಿಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಈ ಘಟನೆ ನಡೆದಿದೆ. ಬೆಂಕಿ ಹೊತ್ತಿರುವುದು ಅರಿಯುತ್ತಿದ್ದಂತೆಯೇ ಚಾಲಕ ಕೆಳಕ್ಕೆ ಹಾರಿ ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಡಿಸೇಲ್ ಖಾಲಿ ಮಾಡಿಕೊಂಡು ಟ್ಯಾಂಕರ್​ ಕರ್ನಾಟಕದ ಕಡೆ ಬರುತ್ತಿತ್ತು. ಅದರಲ್ಲಿ ಡೀಸೆಲ್‌ ಇಲ್ಲದ ಹಿನ್ನೆಲೆಯಲ್ಲಿ ಭಾರಿ ಅನಾಹುತ ಆಗುವುದು ತಪ್ಪಿದೆ. ಕೃಷ್ಣಾ ಸೇತುವೆ ಮೇಲೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಪರಿಣಾಮ ಕೆಲ ಗಂಟೆಗಳ ಕಾಲ ಎರಡೂ ಕಡೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿ ನಡೆದಿದೆ.

ಟ್ಯಾಂಕರ್‌ ಹೊತ್ತಿ ಉರಿದ ವಿಡಿಯೋ ಇಲ್ಲಿದೆ: