ಚಿಕ್ಕಮಗಳೂರು: ರಸ್ತೆ ಅಪಘಾತದಿಂದಾಗಿ ಬಾರದ ಲೋಕಕ್ಕೆ ಮರಳಿದ ನಟ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲುಕಿನ ಪಂಚನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.
ವಿಜಯ್ ಅವರ ಸ್ನೇಹಿತ ರಘು ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು. ಗ್ರಾಮಸ್ಥರಿಂದ ಅಂತಿಮ ದರ್ಶನದ ಬಳಿಕ ವಿಜಯ್ ಅವರಿಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಬಿಲ್ವಪತ್ರೆ, ವಿಭೂತಿಗಳನ್ನು ಬಳಸಿ, ಮಣ್ಣಿನಿಂದ ಶರೀರವನ್ನು ಮುಚ್ಚಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.
ಕುಪ್ಪೂರು ಯತೀಶ್ವರ ಶಿವಾಚಾರ್ಯ ಶ್ರಿಗಳ ನೇತೃತ್ವದಲ್ಲಿ ಅವರ ಸಹೋದರ ಸಿದ್ದೇಶ್ ಅಂತಿಮ ವಿಧಿವಿಧಾನ ನೆರವೇರಿಸಿದರು. ಪೊಲೀಸರಿಂದ ಮೂರು ಸುತ್ತು ಕುಶಲತೋಪು ಹಾರಿಸಿ ವಿಜಯ್ ಅವರಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಮಾಧುಸ್ವಾಮಿ, ಕಡೂರು ಮಾಜಿ ಶಾಸಕ ವೈ ಎಸ್ ವಿ ದತ್ತ ಸೇರಿದಂತೆ ಬಂಧುಬಳಗದವರು, ಗ್ರಾಮಸ್ಥರು ಹಾಜರು ಇದ್ದರು.