ಬೆಂಗಳೂರು: ರಾಜ್ಯದ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಬದಲಾವಣೆ ಕುರಿತ ವಿಷಯದಲ್ಲಿ ಮಠಾಧೀಶರ ಬಗ್ಗೆಯೂ ಸುದ್ದಿಯಾಗುತ್ತಿದೆ. ಇದಾಗಲೇ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರಬೇಕು ಎಂದು ಹಲವು ಮಠಾಧೀಶರು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ.
ಇದರ ಬೆನ್ನಲ್ಲೇ ಇದೇ 25 ರಂದು ಭಾನುವಾರ 10.30 ಕ್ಕೆ ರಾಜ್ಯದ ಮಠಾಧೀಶರು ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದು, ಇದೀಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಸಮಾವೇಶ ರಾಜ್ಯದ ಹಿತದೃಷ್ಟಿಯಿಂದ ಕೂಡಿದೆ.ಇದೇ 25 ರಂದು ಭಾನುವಾರ 10.30 ಕ್ಕೆ ರಾಜ್ಯದ ಮಠಾಧೀಶರ ಸಮಾವೇಶ ಕರೆದಿದ್ದೇವೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ರಾಜ್ಯದ ಅಗ್ರಗಣ್ಯ ಮಠಾಧಿಪತಿಗಳನ್ನ ಈ ಮೂಲಕ ಆಹ್ವಾನ ನೀಡುತ್ತಿದ್ದೇವೆ ಎಂದು ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಮಹಾ ಸ್ವಾಮಿಜಿ ಹೇಳಿದ್ದಾರೆ.
ಅರಮನೆ ಮೈದಾನದ ವೈಟ್ ಪೆಟೆಲ್ಸ್ ಸಭಾಂಗಣದಲ್ಲಿ ಸಮಾವೇಶ ನಡೆಯಲಿದೆ. ಎಲ್ಲಾ ಮಠಾಧೀಶರು ಸಮಾವೇಶಕ್ಕೂ ಆಗಮಿಸಬೇಕು. ಮಠಾಧಿಪತಿಗಳು ವರ್ತಮಾನದ ವಿಚಾರಗಳ ಕುರಿತು ಚರ್ಚೆ ಮಾಡುತ್ತೇವೆ. ರಾಜ್ಯದ ಸಮಗ್ರ ಚಿಂತನೆಯ ಸಮಾವೇಶ ನಡೆಯುತ್ತೆ, ರಾಜಕೀಯ ಸಮಾವೇಶ ಅಲ್ಲ, ಸಮಾವೇಶದಲ್ಲಿ ರಾಜಕೀಯ ವಿಚಾರವೂ ಇರಲಿದೆ ಎಂದು ಅವರು ಹೇಳಿದ್ದಾರೆ.