ಜಿಲ್ಲೆ

ಬಿಸಿಲಿನ ಝಳ- ಉತ್ತರ ಕರ್ನಾಟಕ ತತ್ತರ: ಇನ್ನೂ ಬರಲಿವೆ ಭಯಾನಕ ದಿನಗಳು

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ವಾಡಿಕೆಯಂತೆ ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದರೂ ಕೆಲ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಗುರುವಾರ ಉತ್ತರ ಕರ್ನಾಟಕದ ಕಲಬುರಗಿಯಲ್ಲಿ 41.6, ರಾಯಚೂರಿನಲ್ಲಿ 41.0, ವಿಜಯಪುರದಲ್ಲಿ 40.0, ಕೊಪ್ಪಳದಲ್ಲಿ 39.5, ಗದಗದಲ್ಲಿ 39.1 ಹಾಗೂ ಬೀದರ್‌ನಲ್ಲಿ 39.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಬರುವ ದಿನಗಳಲ್ಲಿ ಗರಿಷ್ಠ ತಾಪಮಾನ ಉಷ್ಣಾಂಶ ಏರಿಕೆ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಲ್ಲಿ ಉಷ್ಣಾಂಶ ಏರಿಕೆ: ಮಾ.25ರಂದು ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನದಲ್ಲಿ 34.5 ಉಷ್ಣಾಂಶ ದಾಖಲಾಗಿತ್ತು. ಒಂದೇ ವಾರದಲ್ಲಿ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ಗುರುವಾರ ಬೆಂಗಳೂರಿನಲ್ಲಿ 37.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮೈಸೂರಿನಲ್ಲಿ ಗರಿಷ್ಠ ತಾಪಮಾನದಲ್ಲಿ 37.9 ಉಷ್ಣಾಂಶ ದಾಖಲಾಗಿದ್ದು, ಮೂರು ದಿನಗಳಲ್ಲಿ ದಿಢೀರ್ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ.