ಜಿಲ್ಲೆ

ಬೀದರ್‌ನಲ್ಲಿ ಮೂರ್ನಾಲ್ಕು ಬಾರಿ ನಡುಗಿದ ಭೂಮಿ: ಬೆಚ್ಚಿಬಿದ್ದ ಜನತೆ- ರಾತ್ರಿಯಿಡೀ ಗ್ರಾಮದಲ್ಲಿ ಭಜನೆ

suchetana

ಬೀದರ್‌: ಕಲಬುರಗಿಯಲ್ಲಿ ಇದಾಗಲೇ ಹಲವಾರು ಬಾರಿ ಭೂಮಿ ಕಂಪಿಸಿದ ಅನುಭವವಾಗಿ ಜನರು ಬೆಚ್ಚಿಬೀಳುತ್ತಿರುವ ಬೆನ್ನಲ್ಲೇ ಇದೀಗ ಬೀದರ್‌ನಲ್ಲಿಯೂ ಇದೇ ರೀತಿ ಭೂಮಿಯ ಕಂಪನ ಉಂಟಾಗಿದೆ.

ಬೀದರನ ಹುಮನಾಬಾದ ತಾಲೂಕಿನ ಕುಮಾರಚಿಂಚೋಳಿ ಗ್ರಾಮದಲ್ಲಿ ರಾತ್ರಿಯೆಲ್ಲಾ ಮೂರ್ನಾಲ್ಕು ಬಾರಿ ಭೂಮಿ ಕಂಪಡಿಸಿದ್ದು, ರಾತ್ರಿ ಇಡೀ ನಿದ್ರೆ ಮಾಡದೆ ಭಜನೆ ಕೀರ್ತನೆ ಮಾಡಿ ರಾತ್ರಿ ಕಳೆದಿದ್ದಾರೆ ಗ್ರಾಮಸ್ಥರು.

ಇಲ್ಲಿ ಕೂಡ ಮೂರ್ನಾಲ್ಕು ದಿನಗಳಿಂದ ಭೂಮಿ ಕಂಪಿಸುತ್ತಿರುವ ಅನುಭವವಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ದಿನವೂ ನಿದ್ದೆ ಮಾಡದೇ ರಾತ್ರಿ ಕಳೆಯುವಂತಾಗಿದೆ ಎನ್ನುತ್ತಿದ್ದಾರೆ. ಆದರೆ ನಿನ್ನೆ ಮಾತ್ರ ಭಯಾನಕ ಅನುಭವಾಗಿದೆ. ರಾತ್ರಿ 10 ರಿಂದ ಶುರುವಾಗಿ, ಮಧ್ಯರಾತ್ರಿ 1 ಕ್ಕೆ ಹಾಗೂ ಮುಂಜಾನೆ 6 ಕ್ಕೆ ಭೂಮಿಯಿಂದ ಭಾರಿ ಶಬ್ಥ ಬಂದಿರುವುದಾಗಿ ಜನರು ಹೇಳುತ್ತಿದ್ದಾರೆ.