ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ- ಮಳೆಗೆ ರಾಜ್ಯದಲ್ಲಿ ನಾಲ್ವರ ಸಾವು: ಮೂರು ದಿನ ಯೆಲ್ಲೋ ಅಲರ್ಟ್‌

Blanket Rain Suresh Gowda
Published on

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ರಾಜ್ಯ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿ ಕೂಡ ಮಳೆ ಭಾರಿ ಅನಾಹುತ ಸೃಷ್ಟಿಸಿದೆ. ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿ ಪರಿಣಾಮ ಈ ಅವಾಂತರ ಸೃಷ್ಟಯಾಗಿದೆ.

ಭಾನುವಾರ ರಾಜ್ಯದಲ್ಲಿ ಸುರಿದ ಮಳೆಗೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಸಿಡಿಲು ಬಡಿದು 46 ವರ್ಷದ ತಿಪ್ಪೆಸ್ವಾಮಿ ಎಂಬುವರು ಸಾವಿಗೀಡಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ದೇಸೂರ ಗ್ರಾಮದಲ್ಲಿ ಮಳೆಗೆ ಸಹೋದರರು ಬಲಿಯಾಗಿದ್ದಾರೆ. ತಗಡಿನ ಶೆಡ್ ಕುಸಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದಿದೆ. ಬಸವರಾಜ್ ವಡ್ಡರ್, ವೆಂಕಟೇಶ ವಡ್ಡರ್ ಮೃತಪಟ್ಟವರು. ದಾವಣಗೆರೆಯಲ್ಲಿ ಮಳೆ ಬರುತ್ತಿದ್ದ ಸಂದರ್ಭದಲ್ಲಿ ಕರೆಂಟ್‌ ಮುಟ್ಟಿದ ಕಾರಣ, ಶಾಕ್‍ ಹೊಡೆದು ಮನೋಜ್‌ ಎಂಬ ಯುವಕ ಬಲಿಯಾಗಿದ್ದಾನೆ. ಮೂತ್ರ ವಿಸರ್ಜನೆಗೆ ಹೋಗಿದ್ದಾಗ ವಿದ್ಯುತ್ ಕಂಬ ಗ್ರೌಂಡ್ ಆಗಿ ಶಾಕ್‌ ಹೊಡೆದಿದೆ.

ಮೈಸೂರು ದಸರಾ ಸಂಭ್ರಮಕ್ಕೂ ಮಳೆ ಅಡ್ಡಿ ಪಡಿಸಿದೆ. ಇನ್ನೂ ಮೂರು ದಿನ ರಾಜ್ಯದಲ್ಲಿ ಯೆಲ್ಲೊ ಅಲರ್ಟ್‌ ಘೋಷಿಸಲಾಗಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net