ಜಿಲ್ಲೆ

ಅಂತಾರಾಷ್ಟ್ರೀಯ ವಿಮಾನ ‌ನಿಲ್ದಾಣದಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ- 150 ಹಾಸಿಗೆಗಳ ಲಭ್ಯ

suchetana

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ 150 ಹಾಸಿಗೆಗಳ ಸೌಲಭ್ಯವುಳ್ಳ ‘ಕೋವಿಡ್ ಕೇರ್ ಸೆಂಟರ್’ನ್ನು ಉದ್ಘಾಟಿಸಿದರು.

ಹಾಗೂ ಗ್ರೀನ್-ಕೋ ಸಂಸ್ಥೆಯ ವತಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿನ ಉಪಯೋಗಕ್ಕಾಗಿ 200 ಲಾರ್ಜ್ ಮೆಡಿಕಲ್ ಗ್ರೇಡ್ 10 ಎಲ್‍ಪಿಎಂ ಆಕ್ಸಿಜನ್ ಕಾನ್ಸೆನ್‍ಟ್ರೇಟರ್’ಗಳ ಸ್ವೀಕರಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ: ಕೆ.ಸುಧಾಕರ್, ಕೆ.ಐ.ಎ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ.ಇ. ಒ ಹರಿ ಮರಾರ್ , ಗ್ರೀನ್ ಕೋ ಗ್ರೂಪ್ ನ ಸಂಸ್ಥಾಪಕರಾದ ಅನಿಲ್ ಚಲಮಲಶೆಟ್ಟಿ ಹಾಗೂ ಮಹೇಶ್ ಕೊಹ್ಲಿ ಉಪಸ್ಥಿತರಿದ್ದರು.