ಬೆಂಗಳೂರು: ಕೊಡಗಿನ ಬೆಡಗಿ, ಸ್ಯಾಂಡಲ್ವುಂಡ್ ಸುಂದರಿ, ನ್ಯಾಷನಲ್ ಕ್ರಶ್ ಎಂದೆಲ್ಲಾ ಬಿರುದು ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಮೊದಲನೆಯದಾಗಿ ಇವರು ಅಬುಧಾಬಿಯಲ್ಲಿ ಎಂಜಾಯ್ ಮೂಡ್ನಲ್ಲಿದ್ದು, ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅಬುಧಾಬಿಯ ಕೆಲವು ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಿದ್ದು, ಅದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನನಗೆ ಟ್ರಾವೆಲ್ ಮಾಡುವುದು ಎಂದರೆ ಇಷ್ಟ. ಅದರಲ್ಲೂ ಶೂಟಿಂಗ್ಗಾಗಿ ಟ್ರಾವೆಲ್ ಎಂದರೆ ಇನ್ನೂ ಇಷ್ಟ ಎಂದು ಬರೆದಿದ್ದಾರೆ.
ಕನ್ನಡ ಮಾತ್ರವಲ್ಲದೇ, ಈಗ ತೆಲುಗು ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಈಕೆ ಮೆರೆಯುತ್ತಿದ್ದಾರೆ. ಸದ್ಯ ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿ ಇರೋ ಈ ನಟಿ ಈಗ ಮತ್ತೊಂದು ವಿಷಯವನ್ನು ಹಂಚಿಕೊಂಡಿದ್ದಾರೆ.
ಅದೇನೆಂದರೆ ಅಕ್ಟೋಬರ್ನಲ್ಲಿ ಗುಡ್ಬೈ ಎಂದಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಒಮ್ಮೆಲೇ ಶಾಕ್ ಆಗಿದ್ದಾರೆ. ಚಿತ್ರರಂಗದಿಂದ ಗುಡ್ಬೈನೋ ಏನೋ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಅಸಲಿಗೆ ರಶ್ಮಿಕಾ ಹೇಳಹೊರಟಿರುವುದು ಅವರ ಮುಂದಿನ ಹಿಂದಿ ಚಲನಚಿತ್ರ ಗುಡ್ಬೈ ಕುರಿತು. ಬಿಟೌನ್‌ನ ಲೆಜೆಂಡ್ ಅಮಿತಾಭ್ ಬಚ್ಚನ್ ಜತೆ ರಶ್ಮಿಕಾ ನಟಿಸಿರುವ ಗುಡ್ ಬೈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ತಮ್ಮ ಬಾಲಿವುಡ್ ಮೊದಲ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡಿ, ರಿಲೀಸ್ ಡೇಟ್ ಕುರಿತು ರಶ್ಮಿಕಾ ಸಂತಸ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 7ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಈ ಕುರಿತು ರಶ್ಮಿಕಾ ಅಪ್‌ಡೇಟ್ ನೀಡಿದ್ದಾರೆ. (ಏಜೆನ್ಸೀಸ್)