ಜಿಲ್ಲೆ

ಬರ್ಬರವಾಗಿ ಕೊಲೆಯಾಗಿ ಹೋದ ರೌಡಿಶೀಟರ್; ಬೈಕ್​ನಲ್ಲಿ ಬಂದವರು ಮಾರಕಾಸ್ತ್ರಗಳಿಂದ ಕೊಚ್ಚಿಕೊಂದರು..

Webdesk - Ravikanth

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ರೌಡಿಶೀಟರ್​ ಒಬ್ಬ ಬರ್ಬರವಾಗಿ ಕೊಲೆಯಾಗಿದ್ದಾನೆ. ಬೈಕ್​ನಲ್ಲಿ ಬಂದವರು ಆತನ ಮೇಲೆ ಎರಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದಾರೆ.

ಜೆ.ಸಿ. ಆನಂದ್​ (36) ಕೊಲೆಯಾದ ರೌಡಿಶೀಟರ್​. ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗದರನಹಳ್ಳಿಯ ಶಿವಪುರ ಬಳಿ ಇಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಈ ಕೊಲೆ ನಡೆದಿದೆ. ಕೊಲೆಗೀಡಾದವ ಪೀಣ್ಯ ಪೊಲೀಸ್ ಠಾಣೆಯ ರೌಡಿಶೀಟರ್​ ಆಗಿದ್ದ. ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.