ಹಾಸನ: ರಾಜ್ಯದಲ್ಲಿ ಮೇಲಿಂದ ಮೇಲೆ ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಿದ್ದು, ಇದೀಗ ಆ ಪಟ್ಟಿಗೆ ಮತ್ತೊಂದು ಪ್ರಕರಣ ಸೇರಿದಂತಾಗಿದೆ. ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ.
ಹಾಸನ ಹೊರವಲಯದ ಕಾಲೇಜೊಂದರ ಹಾಸ್ಟೆಲ್ನಲ್ಲಿ ಈ ಪ್ರಕರಣ ನಡೆದಿದೆ. ಹೇಮಂತ್ ಗೌಡ (20) ನೇಣು ಹಾಕಿಕೊಂಡು ಸತ್ತ ವಿದ್ಯಾರ್ಥಿ. ಈತ ಅರಸಿಕೆರೆಯ ಹಿರಿಯಾಳು ಗ್ರಾಮದ ತೌಪೇಗೌಡ-ಜಯಂತಿ ದಂಪತಿಯ ಪುತ್ರ ಎನ್ನಲಾಗಿದೆ.
ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಕುರಿತು ಇನ್ನೂ ನಿಖರವಾದ ಮಾಹಿತಿ ಬಹಿರಂಗಗೊಂಡಿದಲ್ಲ. ಹಾಸ್ಟೆಲ್ಗೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.