ಜಿಲ್ಲೆ

ಸಮುದಾಯಕ್ಕೆ ನೀಡುವ ಕೊಡುಗೆಯಿಂದ ಗೌರವ

ಇಂದಿರಾ ಎನ್ ಕೆ

ಆರ್ಡಿ: ಕ್ರೀಡಾಕೂಟಗಳಿಂದ ಯುವಜನತೆಯಲ್ಲಿ ಒಗ್ಗಟ್ಟು ಹೆಚ್ಚುತ್ತದೆ. ಸಮುದಾಯದ ಒಳಿತಿಗೆ ನೀಡುವ ಕೊಡುಗೆಗಳಿಂದ ಗೌರವ ಪ್ರಾಪ್ತಿಯಾಗುತ್ತದೆ ಎಂದು ಕುಂದಾಪುರ ಲೋಕೋಪಯೋಗಿ ಇಲಾಖೆ ಅಭಿಯಂತ ಮಹಾಬಲ ನಾಯ್ಕ ಅಲ್ಬಾಡಿ ಹೇಳಿದರು.

ಅಲ್ಬಾಡಿ 9ನೇ ಮೈಲುಕಲ್ಲು ಭಗತ್ ಫ್ರೆಂಡ್ಸ್ ಆಶ್ರಯದಲ್ಲಿ ಕುಡುಬಿ ಸಮುದಾಯದವರಿಗೆ ಇತ್ತೀಚೆಗೆ ಆಯೋಜಿಸಿದ್ದ ದ್ವಿತೀಯ ವರ್ಷದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ ಶಿವರಾಯ ಟ್ರೋಫಿ -2025 ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಕುಡುಬಿ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಪ್ರಭಾಕರ ನಾಯ್ಕ ತೊನ್ನಾಸೆ, ದಿನೇಶ್ ಬರೆಗದ್ದೆ, ಪ್ರಸಾದ್ ತೊನ್ನಾಸೆ, ಜಯರಾಮ ನಾಯ್ಕ ಕಲ್ಮರ್ಗಿ, ಭೋಜ ನಾಯ್ಕ ಕರ್ಪಾಡಿ, ರವಿ ನಾಯ್ಕ 9ನೇ ಮೈಲುಕಲ್ಲು, ಹೆರಿಯಣ್ಣ ನಾಯ್ಕ, ಭಗತ್ ಫ್ರೆಂಡ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗುರು ವಂಡಾರು ಸ್ವಾಗತಿಸಿದರು. ನಿಶ್ಮಿತಾ ವಂದಿಸಿದರು. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ

ಅನುಗ್ರಹ ಫ್ರೆಂಡ್ಸ್ ಯಡ್ತಾಡಿ ಪ್ರಥಮ ಪ್ರಶಸ್ತಿ ಪಡೆಯಿತು. ಶ್ರೀ ಮಲ್ಲಿಕಾರ್ಜುನ ಫ್ರೆಂಡ್ಸ್ ಕಲ್ಮರ್ಗಿ, ಎಂ.ಕೆ.ಫ್ರೆಂಡ್ಸ್ ಬಿಲ್ಲಾಡಿ ತಂಡಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ಪಡೆದವು.