ವಿಪ್ರ ಬಾಲಕ ಬಾಲಕಿಯರ ಧಾರ್ಮಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು. ವಿದ್ವಾನ್ ಗುರುರಾಜ ಕಲ್ಕೂರ್, ಬಲ್ಲಾಡಿ ಚಂದ್ರಶೇಖರ ಭಟ್, ರಾಮಕೃಷ್ಣ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. 
ಜಿಲ್ಲೆ

ಮರೆಯಾಗುತ್ತಿದೆ ಸಂಸ್ಕಾರ, ಸಂಸ್ಕೃತಿ

ಸೌಮ್ಯ ಆರ್

ಹೆಬ್ರಿ: ನಮ್ಮ ಹಿರಿಯರು ನೀಡಿದ ಸಂಸ್ಕಾರ, ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವುದು ಖೇದಕರ ಸಂಗತಿ. ಸಂಸ್ಕಾರ ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಧಾರ್ಮಿಕ ಶಿಕ್ಷಣ ಶಿಬಿರದ ಮೂಲಕ ಮಾಡಬೇಕಾಗಿದೆ ಎಂದು ಉಪನ್ಯಾಸಕ ವಿದ್ವಾನ್ ಗುರುರಾಜ ಕಲ್ಕೂರ್ ಹೇಳಿದರು.

ಹೆಬ್ರಿಯ ಗಿಲ್ಲಾಳಿ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆ ಮತ್ತು ಪೇಜಾವರ ಮಠ ಹಾಗೂ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ವಿಪ್ರ ಬಾಲಕ ಬಾಲಕಿಯರ ಧಾರ್ಮಿಕ ಶಿಕ್ಷಣ ಶಿಬಿರ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯ ಬಲ್ಲಾಡಿ ಚಂದ್ರಶೇಖರ ಭಟ್ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ವಲಯದ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ, ಶಿಬಿರದ ಅಧ್ಯಾಪಕರಾದ ಶ್ರೀನಿವಾಸ ಆಚಾರ್ಯ, ಶ್ರೀಧಾಮ ಆಚಾರ್ಯ, ವಿಕಾಸ ಆಚಾರ್ಯ, ವಿದುಷಿ ವರಲಕ್ಷ್ಮಿ ಭಟ್ ಮುನಿಯಾಲು, ಗೋಶಾಲೆಯ ಟ್ರಸ್ಟಿಗಳಾದ ವಿಷ್ಣುಮೂರ್ತಿ ಆಚಾರ್ಯ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿ ಸದಸ್ಯ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಸ್ವಾಗತಿಸಿದರು. ಗೋಶಾಲಾ ಟ್ರಸ್ಟ್ ಸದಸ್ಯ ಪದ್ಮನಾಭ ಆಚಾರ್ಯ ವಂದಿಸಿದರು.