ಪ್ರಕೃತಿಯ ಮಡಿಲಲ್ಲಿ ರಜೆ ಮಜಾ

camp
ರಜಾರಂಗು ಶಿಬಿರವನ್ನು ಉದ್ದೇಶಿಸಿ ಉದ್ಯಮಿ ಗಣಪತಿ ಟಿ.ಶ್ರೀಯಾನ್ ಮಾತನಾಡಿದರು. ಕೈಲಾಸ ಕಲಾಕ್ಷೇತ್ರ ಅಧ್ಯಕ್ಷ ಹೆರಿಯ ಮಾಸ್ಟರ್, ಧಮನಿ ಸಂಸ್ಥೆಯ ಶ್ರೀಶ ತೆಕ್ಕಟ್ಟೆ, ಧಿಮ್ಸಾಲ್ ಸಂಸ್ಥೆಯ ವಿಜಿತ್ ಇದ್ದರು.
Published on

ಕೋಟ: ಪರಿಸರದ ನೆರಳಲ್ಲಿ ರಜೆ ಮಜಾವಾಗಲು ಸಂಸ್ಥೆ ಸಿದ್ಧತೆ ಮಾಡಿದೆ. ಬಾಲ್ಯ ಅವಿಸ್ಮರಣೀಯವಾಗಿ ಉಳಿಯಲು ಈ ಪ್ರಕೃತಿ ತಲೆ ಎತ್ತಿ ನಿಂತಂತಿದೆ. ರಂಗದ ಆಟಗಳೊಂದಿಗೆ ನಿಮ್ಮ ಬಾಲ್ಯವನ್ನು ನಿಮಗೆ ಕೊಡುವ ಕಾರ್ಯ ಶಿಬಿರಗಳಲ್ಲಿ ನಡೆಯುತ್ತದೆ ಎಂದು ಉದ್ಯಮಿ ಗಣಪತಿ ಟಿ.ಶ್ರೀಯಾನ್ ಹೇಳಿದರು.

ಕೈಲಾಸ ಕಲಾ ಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ, ಧಮನಿ ಟ್ರಸ್ಟ್, ಧಿಮ್ಸಾಲ್ ಕ್ರಿಯೇಷನ್ ಸಹಯೋಗದೊಂದಿಗೆ ನಡೆಯುತ್ತಿರುವ ರಜಾರಂಗು ಶಿಬಿರವನ್ನು ಉದ್ದೇಶಿಸಿ ಇತ್ತೀಚೆಗೆ ಮಾತನಾಡಿದರು. ಮನೆಯಲ್ಲಿ ನಾಲ್ಕು ಗೋಡೆಯ ಮಧ್ಯೆ ಇರಬೇಕಾದ ಮಕ್ಕಳು ಪ್ರಕೃತಿಯೊಂದಿಗೆ ಉಳಿಯುವಂತೆ ಮಾಡಿದ ಸಂಸ್ಥೆಯನ್ನು ಮೆಚ್ಚಲೇಬೇಕು ಎಂದರು.

ಕೈಲಾಸ ಕಲಾಕ್ಷೇತ್ರ ಅಧ್ಯಕ್ಷ ಹೆರಿಯ ಮಾಸ್ಟರ್, ಧಮನಿ ಸಂಸ್ಥೆಯ ಶ್ರೀಶ ತೆಕ್ಕಟ್ಟೆ, ಧಿಮ್ಸಾಲ್ ಸಂಸ್ಥೆಯ ವಿಜಿತ್, ರಂಗ ನಿರ್ದೇಶಕ ರಂಜಿತ್ ಬ್ರಹ್ಮಾವರ ಉಪಸ್ಥಿತರಿದ್ದರು. ಆರಬಿ ಹೆಗಡೆ ಕಾರ್ಯಕ್ರಮ ನಿರೂಪಿಸಿ, ಪರಿಣಿತ ಪರಿಚಯಿಸಿದರು. ಹರ್ಷಿತಾ ಕಾರ್ಯಕ್ರಮದ ವರದಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net