More

    ದೇಸೀಯ ಭಾವನೆಯ ಸೃಜನಾತ್ಮಕ ಚಿತ್ರಣವೇ ಕಲೆ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಭಾರತದಲ್ಲಿ ಇರುವಷ್ಟು ವೈವಿಧ್ಯಮಯ ಕಲೆ ಪ್ರಪಂಚದ ಬೇರಾವುದೇ ದೇಶದಲ್ಲೂ ಇಲ್ಲ. ಆದರೆ, ಕಾಲದ ಮಹಿಮೆಯಿಂದ ಕಲೆಗಳು ಮೂಲೆಗುಂಪಾಗುತ್ತಿದ್ದು, ನಮ್ಮತನವೂ ಸಹ ಕಣ್ಮರೆಯಾಗುತ್ತಿವೆ. ದೇಸೀಯ ಭಾವನೆಯನ್ನು ಸೃಜನಾತ್ಮಕವಾಗಿ ಚಿತ್ರಿಸುವುದೇ ಕಲೆಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಕೃಷ್ಣಮೂರ್ತಿ ರಾವ್​ ಕಿದಿಯೂರು ಅಭಿಪ್ರಾಯಪಟ್ಟರು.

    ಉಡುಪಿಯ ಬಡಗುಪೇಟೆಯಲ್ಲಿರುವ ಹತ್ತು ಮೂರು ಇಪ್ಪಂತ್ತೆಂಟು ಗ್ಯಾಲರಿಯಲ್ಲಿ ಭಾವನಾ ೌಂಡೇಷನ್​(ರಿ.) ಹಾವಂಜೆ, ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಉಡುಪಿ, ನಾಗಲಕ್ಷಿ$್ಮ ಶ್ರೀನಿವಾಸ ಪಬ್ಲಿಕ್​ ಚಾರಿಟೇಬಲ್​ ಟ್ರಸ್ಟ್​ ಹಾಗೂ ಗಾಂಧಿಯನ್​ ಸೆಂಟರ್​ ಫಾರ್​ ಫಿಲಾಸಾಫಿಕಲ್​ ಆರ್ಟ್ಸ್​ ಮತ್ತು ಸೈನ್ಸ್​ (ಮಾಹೆ) ಸಹಯೋಗದಲ್ಲಿ ಗುರುವಾರ ಆಯೋಜಿದ್ದ ದೇಸೀಯ ಜನಪದ ಸರಣಿ ಕಲಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಸಂಪ್ರದಾಯ ಅರಿವು

    ಕರ್ನಾಟಕದ ಕಾವಿ ಕಲೆಯನ್ನು ಉಳಿಸುತ್ತಿರುವ ಜನಾರ್ದನ ರಾವ್​, ದೇಶದ ಇತರ ಕಲೆಯನ್ನೂ ಉಡುಪಿಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಅವರ ಕಲಾಪ್ರೇಮ ಸೂಚಿಸುತ್ತದೆ. ಇಂತಹ ಕಾರ್ಯಾಗಾರದ ಮೂಲಕ ದೇಶದ ಸಂಪ್ರದಾಯ ಏನು? ಹೇಗಿತ್ತು ಎಂದು ಇಂದಿನವರು ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದರು.

    ಬೌದ್ಧಿಕ ಬೆಳವಣಿಗೆ

    ಕಾವಿ ಕಲಾವಿದ ಡಾ. ಜನಾರ್ದನ ರಾವ್​ ಹಾವಂಜೆ ಪ್ರಸ್ತಾವಿಕವಾಗಿ ಮಾತನಾಡಿ, ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಕಲೆ ಅಗತ್ಯ. ಆದರೆ, ಯಾಂತ್ರೀಕೃತ ಬದುಕಿನಿಂದಾಗಿ ಜ್ಞಾನ ಮಡುಗಟ್ಟಿದೆ. ದೇಸೀಯ ಕಲೆಯ ಕುರಿತು ಆನ್​ಲೈನ್​ ಮೂಲಕ ಕಾರ್ಯಾಗಾರ ನಡೆಸುವಂತೆ ಬಹಳ ಬೇಡಿಕೆ ಇದೆ. ಆದರೆ, ಕಲೆಯನ್ನು ಗುರುವಿನಿಂದ ನೇರವಾಗಿ ಕಲೆತಾಗಲೇ ಮನಸ್ಸಿಗೆ ಹೆಚ್ಚು ನಾಟುತ್ತದೆ. ಅಲ್ಲದೆ, ಅದರ ಪ್ರಭಾವವೂ ಲಭಿಸುತ್ತದೆ ಎಂದರು.
    ಭಾವನಾ ಪ್ರತಿಷ್ಠಾನದ ನಿರ್ದೇಶಕ ಹಾವಂಜೆ ಮಂಜುನಾಥ ರಾವ್​ ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದರು.

    ಬಿಹಾರ ರಾಜ್ಯದ 4 ಪ್ರಮುಖ ಕಲೆ

    ಭಾವನಾ ೌಂಡೇಷನ್​ನ 14ನೇ ಸರಣಿ ಕಾರ್ಯಾಗಾರ ಇದಾಗಿದ್ದು, ಬಿಹಾರ ರಾಜ್ಯದ 4 ಪ್ರಮುಖ ಕಲೆಯನ್ನು 4 ದಿನಗಳ ಕಾಲ ಕಲಿಸಲಾಗುತ್ತಿದೆ. ಮದುವೆಯ ಸಂದರ್ಭದಲ್ಲಿ ರಚಿಸುವ ಕೋಹ್ಬಾರ್​ ಚಿತ್ರಕಲೆ, ಮಹಿಳೆಯರ ಬಿಂದಿ ವಿನ್ಯಾಸದ ಟಿಕುಲಿ ಕಲೆ, ಪಾರಂಪರಿಕ ಮಂಜೂಷಾ ಚಿತ್ರಕಲೆ ಮತ್ತು ಮನೆಗಳಲ್ಲಿ ರಚಿಸುವ ಜಾಲಿ (ಕಿಟಕಿ ವಿನ್ಯಾಸ) ಕಲೆಯನ್ನು ಶಿಬಿರಾರ್ಥಿಗಳಿಗೆ ಕಲಿಸಲಾಯಿತು. ರಾಷ್ಟ್ರಪ್ರಶಸ್ತಿ ಪುರಸತ ಬಿಹಾರದ ಕಲಾವಿದರಾದ ಶ್ರವಣ್​ ಪಾಸ್ವಾನ್​ ಹಾಗೂ ಪವನ್​ಕುಮಾರ್​ ಸಾಗರ್​ ಕಾರ್ಯಾಗಾರ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts