More

    ಸಮುದಾಯ ಭವನಕ್ಕೆ 25 ಲಕ್ಷ ರೂಪಾಯಿ ದೇಣಿಗೆ

    ರೋಣ: ಗಾಣಿಗ ಸಮುದಾಯದ ಜನರು ಮುಗ್ಧ್ದರಿದ್ದು, ನಂಬಿದವರನ್ನು ಕೈ ಬಿಡುವುದಿಲ್ಲ. ಸಮುದಾಯ ಭವನ ಕಟ್ಟಡಕ್ಕೆ ಒಂದು ದಿನದ ಕೂಲಿಯನ್ನಾದರೂ ದೇಣಿಗೆ ನೀಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
    ಪಟ್ಟಣದಲ್ಲಿ ಗಾಣಿಗ ಸಮಾಜದ ವತಿಯಿಂದ ಭಾನುವಾರ ಏರ್ಪಡಿಸಿದ್ದ ನೂತನ ಗಾಣಿಗ ಸಮುದಾಯ ಭವನದ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಶಾಸಕ ಜಿ.ಎಸ್. ಪಾಟೀಲ ಅವರು ಮಾಡಿದ ಸಹಾಯ, ಸಹಕಾರವನ್ನು ಎಲ್ಲರೂ ಸ್ಮರಿಸಬೇಕು. ನನ್ನ ವೈಯಕ್ತಿಕ ಹಣದಲ್ಲಿ ಸಮುದಾಯ ಭವನಕ್ಕೆ 25 ಲಕ್ಷ ರೂ. ಸಹಾಯಧನ ನೀಡುತ್ತೇನೆ. ಮೊದಲನೇ ಕಂತು 10 ಲಕ್ಷ ರೂ. ಒಂದೆರಡು ದಿನದಲ್ಲಿ ನೀಡುತ್ತೇನೆ ಎಂದು ಭರವಸೆ ನೀಡಿದರು.
    ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಗಾಣಿಗ ಸಮುದಾಯದ ಕಟ್ಟಡಕ್ಕೆ ಸಮುದಾಯದ ಜನರೊಂದಿಗೆ ಇತರೆ ಸಮುದಾಯದ ಜನರನ್ನು ಒಗ್ಗೂಡಿಸಿಕೊಂಡು ಅವರಿಂದ ಸಹಾಯಧನ ಪಡೆದು ಕಟ್ಟಡ ಪೂರ್ಣಗೊಳಿಸಲು ಮುಂದಾಗಬೇಕು. ಸರ್ಕಾರವು ದಲಿತ, ಅಲ್ಪಸಂಖ್ಯಾತ ಸಮಾಜದ ಅಭಿವೃದ್ಧಿಗಾಗಿ ಅನುದಾನ ಮೀಸಲಿಟ್ಟಿದೆ. ಗಾಣಿಗ ಸಮುದಾಯ ಭವನ ಶೀಘ್ರವಾಗಿ ಕಾಮಗಾರಿ ಮುಗಿಯುವುದರ ಜತೆಗೆ ಸಮಾಜದ ಜನರಿಗೆ ಉಪಯೋಗವಾಗಬೇಕು ಎಂದರು. ಹೊಳೆಆಲೂರ ಎಪಿಎಂಸಿ ಮಾಜಿ ಅಧ್ಯಕ್ಷ ಪರುಶರಾಮ ಅಳಗವಾಡಿ ಮಾತನಾಡಿದರು. ಹಾಳಕೇರಿಯ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಡಾ. ಶ್ರೀ ಜಯಬಸವ ಕುಮಾರ ಮಹಾಸ್ವಾಮೀಜಿ, ಶ್ರೀ ಗುಲಗಂಜಿ ಮಠದ ಗುರುಪಾದ ಮಹಾಸ್ವಾಮೀಜಿ, ಶ್ರೀ ಬಸವಲಿಂಗ ಮಹಾಸ್ವಾಮೀಜಿ, ಶ್ರೀ ಗಂಗಾಧರ ಮಹಾಸ್ವಾಮೀಜಿ, ಶ್ರೀ ಸದಾಶಿವಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿ ಸಮ್ಮುಖ ವಹಿಸಿದ್ದರು. ದಶರಥ ಗಾಣಿಗೇರ, ಬಸವರಾಜ ಬಿಂಗಿ, ಬಸವರಾಜ ನವಲಗುಂದ, ಹುಚ್ಚಪ್ಪ ನವಲಗುಂದ, ಬಸವರಾಜ ಸುಂಕದ, ಮಲ್ಲಣ್ಣ ತೊದಲಬಾಗಿ, ಬಿ.ಆರ್. ಪಾಲಾಕ್ಷಗೌಡ್ರ, ಪ್ರಸನ್ನ ದೇಸಾಯಿ, ಬಾಲಚಂದ್ರ ತೊದಲಬಾಗಿ, ಷಣ್ಮುಖಪ್ಪ ಬಡ್ನಿ, ವಿ.ಆರ್. ಗುಡಿಸಾಗರ, ಮುತ್ತಣ್ಣ ಸಂಗಳದ, ಫಕೀರಗೌಡ ಪಾಟೀಲ, ಸಿದ್ದಣ್ಣ ಬಂಡಿ, ಯಚ್ಚರಗೌಡ ಗೋವಿಂದಗೌಡ್ರ, ಅಭಿಷೇಕ ನವಲಗುಂದ, ವಿ.ಬಿ. ಸೋಮನಕಟ್ಟಿಮಠ, ಮಲ್ಲಯ್ಯ ಮಹಾಪುರಷಮಠ, ಎಸ್.ಆರ್. ಕುಮಸಗಿ, ಸಮಾಜದ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts