ಜಿಲ್ಲೆ

ಟಿಟಿ-ಕಾರ್​ ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು

Webdesk - Manjunatha B

ಚಿಕ್ಕಮಗಳೂರು: ಕಾರು ಹಾಗೂ ಟೆಂಪೋ ಟ್ರಾವೆಲರ್​(TT) ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂರು ವರ್ಷದ ಮಗು ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನಲ್ಲಿ ನಡೆದಿದೆ.

ಕಡುರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಮತ್ತಘಟ್ಟ ಬಳಿ ಘಟನೆ ನಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಹಾಗೂ ಟಿಟಿ ಪಲ್ಟಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಮೃತ ದುರ್ದೈವಿಗಳನ್ನು ಮಯಾಂಕ್​(3) ಹಾಗೂ ಗಿರಿಧರ್(46) ಎಂದು ಗುರುತಿಸಲಾಗಿದೆ.

ಶುಭಕಾರ್ಯಕ್ಕೆ ತೆರಳುವ ವೇಳೆ ಘಟನೆ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಗಿರಿಧರ್ ಕುಟುಂಬ ಸಮೇತರಾಗಿ ಸಂಬಂಧಿಕರೊಬ್ಬರ ಮದುವೆಗೆಂದು ತೆರಳುತ್ತಿದ್ದರು.

ಈ ವೇಳೆ ಚಿಕ್ಕಮಗಳೂರಿನಿಂದ ಕೇರಳ ಕಡೆ ಹೊರಟ್ಟಿದ್ದ ಟಿಟಿ ಹಾಗೂ ಕಾರ್​ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಕಾರಿನಲ್ಲಿದ್ದ ಗಿರಿಧರ್​, ಮಯಾಂಕ್​ ಹಾಗೂ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಂಭೀರ ಗಾಯ

ಕಾರ್​ ಹಾಗೂ ಟಿಟಿ ನಡುವಿನ ಡಿಕ್ಕಿ ಹೊಡೆದ ರಭಸಕ್ಕೆ ಎರಡು ವಾಹನಗಳು ಪಲ್ಟಿ ಹೊಡೆದಿದ್ದು ಕೇರಳ ಪ್ರವಾಸಕ್ಕೆ ಟೆಂಪೋ ಟ್ರಾವೆಲರ್ನಲ್ಲಿ ತೆರಳುತ್ತಿದ್ದ 7 ಮಂದಿಗೆ ಗಂಭೀರ ಗಾಯವಾಗಿದೆ.

ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.