ಜಿಲ್ಲೆ

ಸಿಡಿ ಪ್ರಕರಣ: ವಿಚಾರಣೆಗೆ ಹಾಜರಾದ ಜಾರಕಿಹೊಳಿಗೆ 50 ಪ್ರಶ್ನೆ ಎದುರಾಯ್ತು! ಏನೆಲ್ಲ ಉತ್ತರ ಕೊಟ್ರು ಗೊತ್ತಾ?

arunakunigal

ಬೆಂಗಳೂರು: ಸಿಡಿ ಕೇಸ್​ ಸಂಬಂಧ ಶುಕ್ರವಾರ ಎಸ್​ಐಟಿ ವಿಚಾರಣೆಗೆ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹಾಜರಾಗಿದ್ದರು. ಆಡುಗೋಡಿ ಟೆಕ್ನಿಕಲ್ ಸೆಲ್​ನಲ್ಲಿ ನಿರಂತರ 4 ಗಂಟೆ ಕಾಲ ಜಾರಕಿಹೊಳಿಯನ್ನು ಎಸ್​ಐಟಿ ಪೊಲೀಸರು ತೀವ್ರ ವಿಚಾರಣೆ ನಡೆಸಿದರು.

ನಿನ್ನೆ ನಡೆದ ವಿಚಾರಣೆಯಲ್ಲಿ ಏನೇನೆಲ್ಲ ಆಯ್ತು ಎಂಬುದರ ಇನ್​ಸೈಡ್​ ಮಾಹಿತಿ ಇಲ್ಲಿದೆ. ವಿಚಾರಣೆಗೂ ಮುನ್ನ ವಿವಿಧ ಆಯಾಮಗಳಲ್ಲಿ 50 ಪ್ರಶ್ನೆಗಳನ್ನ ಎಸ್ಐಟಿ ಸಿದ್ಧಪಡಿಸಿಕೊಂಡಿತ್ತು. ನಿನ್ನೆ ಸಂಜೆ 4 ಗಂಟೆಗೆ ಬಂದ ರಮೇಶ್ ಜಾರಕಿಹೊಳಿ, ಈ 50 ಪ್ರಶ್ನೆಗಳಲ್ಲಿ ಉತ್ತರಿಸಿದ್ದು 20 ಪ್ರಶ್ನೆಗೆ ಮಾತ್ರ. ಇದನ್ನೂ ಓದಿರಿ ‘ಸಿಡಿ ಲೇಡಿ’ ಹೆಸರಲ್ಲಿ ರಿಜಿಸ್ಟರ್ ಆಯ್ತು ಸಿನಿಮಾ ಟೈಟಲ್! ಸ್ಯಾಂಡಲ್​ವುಡ್​ನಲ್ಲಿ ವಿವಾದ ಎಬ್ಬಿಸಲಿದ್ಯಾ?

ಸಿಡಿ ಕೇಸ್​ನ ಕಿಂಗ್​ಪಿನ್ ಎನ್ನಲಾದ ನರೇಶ್ ಗೌಡನ ಫೋಟೋ ತೋರಿಸಿದ ಎಸ್​ಐಟಿ, 'ಈತನನ್ನ ನೋಡಿದ್ದೀರಾ? ನಿಮ್ಮ ಸಂಪರ್ಕಕ್ಕೆ ನರೇಶ್ ಬಂದಿದ್ದನೇ? ನಿಮ್ಮ ಬಳಿ ಎಷ್ಟು ಮಂದಿ ಆಪ್ತ ಸಹಾಯಕರಿದ್ದಾರೆ? ಅವರನ್ನ ಸಿಡಿ ಕೇಸ್​ ತಂಡದಲ್ಲಿರುವ ಯಾರಾದರೂ ಸಂಪರ್ಕಿಸಿದ್ದರೇ? ಯುವತಿ ಹೇಗೆ ಪರಿಚಯ? ಯಾರಿಂದ ಪರಿಚಯ? ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟರು.

ಎಸ್​ಐಟಿ ಅಧಿಕಾರಿಗಳ ಕೆಲ ಪ್ರಶ್ನೆಗೆ ಅಳೆದು ತೂಗಿ ಉತ್ತರ ನೀಡಿದ ರಮೇಶ್​ ಜಾರಕಿಹೊಳಿ, ಉಳಿದ ಪ್ರಶ್ನೆಗಳಿಗೆ ತನ್ನ ವಕೀಲರನ್ನು ಸಂಪರ್ಕಿಸಿದ ಬಳಿಕ ಹೇಳ್ತೀನಿ ಎಂದರು. ಈ ಹಿಂದೆ ದೂರು ನೀಡಿದ್ದ ವೇಳೆಯೂ ಮಾಜಿ ಸಚಿವರು ಅಸ್ಪಷ್ಟ ಮಾಹಿತಿ ನೀಡಿದ್ದರು. ಷಡ್ಯಂತ್ರ ನಡೆಸಿದ್ದಾರೆಂದು ಹೇಳಿದ್ದ ಜಾರಕಿಹೊಳಿ, ಯಾರು ಆ ವ್ಯಕ್ತಿಗಳೆಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಸದಾಶಿವನಗರದಲ್ಲಿ ನಡೆದಿದ್ದ ಕುತಂತ್ರ ಎಂದು ಹೇಳಿದ್ದರಷ್ಟೆ. ಆದರೆ ಸದಾಶಿವನಗರದಲ್ಲಿ ಎಲ್ಲಿ? ಎಂದು ರಿವೀಲ್ ಮಾಡಿರಲಿಲ್ಲ.