ಬೆಂಗಳೂರು: ಸಿಡಿ ಕೇಸ್ನಿಂದ ಭಾರಿ ಟೆನ್ಷನ್ನಲ್ಲಿರುವ ರಮೇಶ್ ಜಾರಕಿಹೊಳಿ ಮೂರು ದಿನದಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರೇಕೆ ನಾಪತ್ತೆಯಾದರು? ಎಲ್ಲಿಯ ಅಜ್ಞಾತ ಸ್ಥಳದಲ್ಲಿ ಕೂತಿದ್ದಾರೆ? ಎಂಬ ಕುತೂಹಲ ಮೂಡಿದೆ.
ಮಾ.29ರಂದು ವಸಂತನಗರದ ಗುರುನಾನಕ್ ಭವನದಲ್ಲಿ ನ್ಯಾಯಾಧೀಶರ ಮುಂದೆ ಹಾಜರ್ ಆದ ಸಿಡಿ ಯುವತಿ, ಹೇಳಿಕೆ ಕೊಟ್ಟಿದ್ದಾಳೆ. ಬಳಿಕ ಎಸ್ಐಟಿ ಪೊಲೀಸರು ಆಡುಗೋಡಿ ಟೆಕ್ನಿಕಲ್ ಸೆಂಟರ್ಗೆ ಕರೆದೊಯ್ದು ವಿಚಾರಣೆ ಮಾಡಿದೆ. ನಿನ್ನೆ ವೈದ್ಯಕೀಯ ಪರೀಕ್ಷೆ ಕೂಡ ನಡೆದಿದ್ದು, ಇಂದು ಯುವತಿ ವಾಸವಿದ್ದ ಆರ್ಟಿ ನಗರದ ಪಿಜಿ, ರಮೇಶ್ ಜಾರಕಿಹೊಳಿ ಯುವತಿಯನ್ನು ಕರೆಸಿಕೊಂಡಿದ್ದರು ಎನ್ನಲಾದ ಮಲ್ಲೇಶ್ವರಂನ ಅಪಾರ್ಟ್ಮೆಂಟ್ ಸ್ಥಳ ಮಹಜರು ನಡೆಯುತ್ತಿದೆ. ಮೂರು ದಿನದಿಂದ ಇಷ್ಟೆಲ್ಲ ಬೆಳವಣಿಗೆ ಆದರೂ ರಮೇಶ್ ಮಾತ್ರ ಮಾ.29ರ ರಾತ್ರಿಯಿಂದ ಅಜ್ಞಾತ ಸ್ಥಳದಲ್ಲಿದ್ದಾರೆ. ಇದನ್ನೂ ಓದಿರಿ ಏರಿಯಾ ವಿದ್ಯುತ್ ತೆಗೆದು ರಾತ್ರೋರಾತ್ರಿ ಸಿಡಿ ಲೇಡಿ ಪೋಷಕರನ್ನು ಪೊಲೀಸರು ಸ್ಥಳಾಂತರಿಸಿದ್ದೇಕೆ?
ಯುವತಿ ಹೇಳಿಕೆ ಕೊಟ್ಟು ಎರಡು ದಿನ ಕಳೆದರೂ ರಮೇಶ್ ಮೌನವಾಗಿದ್ದಾರೆ. ಇತ್ತ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿಲ್ಲ. ರಮೇಶ್ರ ಮುಂದಿನ ನಡೆಯೇನು? ಇವರು ನಿರೀಕ್ಷಣಾ ಜಾಮೀನು ತಗೋತಾರಾ? ಇಲ್ವಾ? ಇಂದಾದರೂ ಕಾಣಿಸಿಕೊಳ್ತಾರಾ? ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.