ramesh jarakiholi 
ಜಿಲ್ಲೆ

ಜಾರಕಿಹೊಳಿ ಸಿಡಿ ಕೇಸ್​: ಸಿಕ್ಕಿಬಿದ್ದದ್ದು ಇಬ್ಬರಲ್ಲ, ಐವರು! ಯುವತಿಯೂ ಇದ್ದಾಳೆ

arunakunigal

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಪ್ರಕರಣ ಸಂಬಂಧ ಎಸ್ಐಟಿ(ಸ್ಪೆಷಲ್​ ಇನ್ವೆಷ್ಟಿಗೇಶನ ಟೀಂ) ಬಲೆಗೆ ಬಿದ್ದಿರುವುದು ಇಬ್ಬರಲ್ಲ, ಐವರು!

ಸಿಡಿ ಪ್ರಕರಣದ ತನಿಖೆ ಕೈಗೊಂಡ ಮೊದಲ ದಿನವೇ ಎಸ್​ಐಟಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಐವರು ಶಂಕಿತ ಆರೋಪಿಗಳನ್ನ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಪೈಕಿ ಓರ್ವ ಯುವತಿ ಇದ್ದಾಳೆ.

ಐವರ ಕಾಲ್​ ರೆಕಾರ್ಡ್​ ಆಧಾರಿಸಿ ಎಸ್​ಐಟಿ ತಂಡ ವಶಕ್ಕೆ ಪಡೆದಿದೆ. ಇದರಲ್ಲಿ ಓರ್ವ ಟೆಕ್​ ಎಕ್ಸಫರ್ಟ್​. ಈತನನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರಿನ ಆಲ್ದೂರಿನ ಯುವಕ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಒಬ್ಬ, ಬೆಂಗಳೂರಿಮ ಯಶವಂತಪುರದಲ್ಲಿ ಒಬ್ಬ, ಬೆಂಗಳೂರಿನ ವಿಜಯನಗರಲ್ಲಿ ರೂಂ ಮಾಡಿಕೊಂಡಿದ್ದ ಯುವಕನನ್ನ ರಾಮನಗರದಲ್ಲಿ... ಹೀಗೆ ವಿವಿಧೆಡೆ ಐವರನ್ನು ಎಸ್​ಐಟಿ ವಶಕ್ಕೆ ಪಡೆದಿದೆ. ಇದರಲ್ಲಿ ಯುವತಿಯ ಪ್ರಿಯಕರನೂ ಸೇರಿದ್ದಾನೆ. ಸದ್ಯದ ಮಾಹಿತಿ ಪ್ರಕಾರ ಸಿಐಡಿ ಕಚೇರಿಯಲ್ಲಿ ಒಬ್ಬನ ವಿಚಾರಣೆ ಆರಂಭವಾಗಿದೆ. ಉಳಿದ ನಾಲ್ವರನ್ನು ಸಿಐಡಿ ಕಚೇರಿಗೆ ಕರೆತರಲಾಗುತ್ತಿದೆ.