ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಹಗರಣ ಕೇಸ್ಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಸಿಕ್ಕಿದೆ. ಸಂತ್ರಸ್ತೆಯ ಪರವಾಗಿ ಪೊಲೀಸ್ ಠಾಣೆಗೆ ಬಂದು ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕೊಟ್ಟ ಸ್ಟೇಟ್ಮೆಂಟ್ ಮೇರೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸಿಡಿ ಬಿಡುಗಡೆಗೂ ಮುನ್ನಾದಿನ ಅಂದರೆ ಮಾ.1ರಂದು ಸಂತ್ರಸ್ತೆ ಕುಟುಂಬದ ಸ್ನೇಹಿತನನ್ನ ದಿನೇಶ್ ಕಲ್ಲಹಳ್ಳಿ ಭೇಟಿ ಮಾಡಿದ್ದು ಬೆಂಗಳೂರಿನ ಗಾಂಧಿನಗರದಲ್ಲಿವ ರಾಮಕೃಷ್ಣ ಲಾಡ್ಜ್ನಲ್ಲಿ. ಆ ವ್ಯಕ್ತಿ ಬಳಿ ಇದ್ದ ಸಿಡಿಯನ್ನದಿನೇಶ್ ಕಲ್ಲಹಳ್ಳಿ ಅಲ್ಲೇ ಪಡೆದಿದ್ದರಂತೆ. ಇದನ್ನೂ ಓದಿರಿ ರಮೇಶಣ್ಣನ ಮರ್ಯಾದೆ ತೆಗೆಯಲು ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ, ದಿನೇಶ್ ಕಲ್ಲಹಳ್ಳಿ ಕೇವಲ ದಾಳ…
ಜಾರಕಿಹೊಳಿ ಕೇಸ್ ಬೆನ್ನತ್ತಿದ ಕಬ್ಬನ್ ಪಾರ್ಕ್ ಹಾಗೂ ಸಿಸಿಬಿ ಪೊಲೀಸರು ನಿನ್ನೆ ಸಂಜೆ ರಾಮಕೃಷ್ಣ ಲಾಡ್ಜ್ಗೆ ಭೇಟಿ ನೀಡಿದ್ದಾರೆ. ಅಲ್ಲದೆ ಲಾಡ್ಜ್ನಲ್ಲಿದ್ದ ಸಿಸಿ ಕ್ಯಾಮರಾ, ಡಿವಿಆರ್ ವಶಕ್ಕೆ ಪಡೆದಿದ್ದಾರೆ. ದಿನೇಶ್ ಕಲ್ಲಹಳ್ಳಿ ಭೇಟಿ ಮಾಡಿದ್ದ ವ್ಯಕ್ತಿ ಹಾಗೂ ಅವರಿಬ್ಬರು ಮಾತನಾಡುತ್ತಿರುವ ದೃಷ್ಯಗಳನ್ನ ಸಿಸಿಬಿ ಪಡೆದಿದೆ. ಅಲ್ಲದೆ ಲಾಡ್ಜ್ನ ಸಿಬ್ಬಂದಿ ಬಳಿಯೂ ಮಾಹಿತಿ ಕಲೆ ಹಾಕಿದ್ದಾರೆ.
ದಿನೇಶ್ ಕಲ್ಲಹಳ್ಳಿಗೆ ಸಿಡಿ ಕೊಟ್ಟ ದಿನ ಲಾಡ್ಜ್ನಲ್ಲಿ ಕರ್ತವ್ಯದಲ್ಲಿದ್ದ ಎಲ್ಲರನ್ನೂ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವ್ಯಕ್ತಿಗಳ ಕುರಿತು ವಿಚಾರಣೆ ನಡೆಸಿರುವ ಪೊಲೀಸರು, ಈ ಹಿಂದೆ ಆ ವ್ಯಕ್ತಿ ಎಷ್ಟು ಬಾರಿ ಹೊಟೇಲ್ಗೆ ಬಂದಿದ್ದಾರೆ? ದೃಶ್ಯದಲ್ಲಿ ಸೆರೆಯಾದ ವ್ಯಕ್ತಿ ಯಾರ ಜೊತೆ ಬಂದಿದ್ದ? ಆ ವ್ಯಕ್ತಿ ಬರೀ ಕೈಯಲ್ಲಿ ಬಂದಿದ್ದನೇ? ಅಥವಾ ಫೈಲ್ ಬ್ಯಾಗ್ ಏನಾದ್ರೂ ತಂದಿದ್ರಾ? ಎಂಬುದರ ಬಗ್ಗೆಯೂ ಖಾಕಿ ಪಡೆ ಮಾಹಿತಿ ಕಲೆ ಹಾಕಿದೆ.