ಜಿಲ್ಲೆ

ಸಚಿವ ಸಿ.ಪಿ. ಯೋಗೇಶ್ವರ್​ಗೆ ತವರಿನಲ್ಲೇ ಮುಖಭಂಗ: ಪ್ರಾಬಲ್ಯ ಮೆರೆದ ಎಚ್​ಡಿಕೆ

ರಾಮನಗರ: ಸಚಿವ ಸ್ಥಾನ ಸಿಕ್ಕ ಖುಷಿಯಲ್ಲಿರುವ ಸಿ.ಪಿ. ಯೋಗೇಶ್ವರ್​ಗೆ ತವರಿನಲ್ಲೇ ಭಾರಿ ಮುಖಭಂಗವಾಗಿದೆ. ಸ್ವಗ್ರಾಮ ಚಕ್ಕೆರೆ ಗ್ರಾಮ ಪಂಚಾಯಿತಿಯು ಜೆಡಿಎಸ್ ತೆಕ್ಕೆಗೆ ಬಿದ್ದಿದೆ.

ಒಟ್ಟು 14 ಸದಸ್ಯರ ಪೈಕಿ 12ರಲ್ಲಿ ಜೆಡಿಎಸ್ ಮತ್ತು 2ರಲ್ಲಿ ಬಿಜೆಪಿ ಜಯ ಸಾಧಿಸಿದೆ. ನೂತನ ಅಧ್ಯಕ್ಷೆ ಜೆಡಿಎಸ್ ಬೆಂಬಲಿತ ಪುಟ್ಟಮ್ಮ, ಉಪಾಧ್ಯಕ್ಷ ಸುಜಯ್ ಕುಮಾರ್ ಆಯ್ಕೆಯಾಗಿದ್ದಾರೆ. ಯೋಗೇಶ್ವರ್ ಹುಟ್ಟೂರು ಚಕ್ಕೆರೆಯಲ್ಲೇ ಜೆಡಿಎಸ್ ತನ್ನ ಪ್ರಾಬಲ್ಯ ಮೆರೆದಿದೆ.

ಜೆಡಿಎಸ್​ ಸದಸ್ಯರು ಮಾಜಿ ಸಿಎಂ ಎಚ್​ಡಿಕೆ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷಗೆ ಎಚ್​ಡಿಕೆ ಶುಭ ಕೋರಿದ್ದಾರೆ. ಹಾಲಿ ಸಚಿವರಾಗಿದ್ದರೂ ಸಹ ಯೋಗೇಶ್ವರ್​ಗೆ ಹುಟ್ಟೂರಲ್ಲೇ ಮುಖಭಂಗವಾಗಿದೆ. (ದಿಗ್ವಿಜಯ ನ್ಯೂಸ್​)