ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿರುವುದು. 
ಜಿಲ್ಲೆ

ಧರೆಗುರುಳಿದ 7 ವಿದ್ಯುತ್ ಕಂಬ : ಗಾಳಿ-ಮಳೆಯಿಂದ ಹಾನಿ

Avinash R

ಕೊಕ್ಕಡ: ಶನಿವಾರ ಸುರಿದ ಭಾರಿ ಗಾಳಿ-ಮಳೆಗೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿಯ ಶಿಬಾಜೆ ಪರಿಸರದಲ್ಲಿ ಏಳು ವಿದ್ಯುತ್ ಕಂಬಗಳು ಧರೆಗುರುಳಿವೆ. ಶಿಬಾಜೆಯ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ ಮಳೆಯೊಂದಿಗೆ ವಿಪರೀತ ಗಾಳಿ ಬೀಸಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮೆಸ್ಕಾಂ ಇಲಾಖೆಯ ಪವರ್‌ಮನ್‌ಗಳು ಹಾಗೂ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.