More

    ರಾಜ್ಯಕ್ಕೆ ಮಾಡಿರುವ ಅನ್ಯಾಯಕ್ಕೆ ಮೋದಿ ಉತ್ತರಿಸಲಿ ಪ್ರತಿಭಟನೆಯಲ್ಲಿ ಹರೀಶ್ ಕುಮಾರ್ ಆಗ್ರಹ

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಹಿನ್ನೆಡೆಯಾಗಲಿರುವುದರಿಂದ ಪ್ರಧಾನ ಮಂತ್ರಿಯವರ ರೋಡ್ ಶೋ ಆಯೋಜಿಸಲಾಗಿದೆ. ಅವರು ರಾಜ್ಯಕ್ಕೆ ಮಾಡಿರುವ ಅನ್ಯಾಯಕ್ಕೆ ಉತ್ತರಿಸಬೇಕು ಎಂದು ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು.


    ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲು ನೀಡದೆ ಇರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.


    ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿ, ತೆರಿಗೆ ಪಾಲು ಕಡಿತ ಮಾಡಿರುವುದರಿಂದ ರಾಜ್ಯಕ್ಕೆ 45,000 ಕೋ.ರೂ ನಷ್ಟವಾಗಿದೆ. ಬರ, ನೆರೆ, ಕೋವಿಡ್, ಇತರ ಸಂಕಷ್ಟದ ಕಾಲದಲ್ಲಿ ರಾಜ್ಯಕ್ಕೆ ಮೋದಿಯವರು ಬಂದಿಲ್ಲ. ಈಗ ಯಾಕೆ ಬರುತ್ತಿದ್ದಾರೆ ಎಂಬುದಕ್ಕೆ ಉತ್ತರಿಸಬೇಕು. ಅವರು ಬರುವುದು ರಾಜಕೀಯಕ್ಕಾಗಿಯೇ ಹೊರತು ರಾಜ್ಯದ ಜನರ ಹಿತಕ್ಕಾಗಿ ಅಲ್ಲ ಎಂದು ಹೇಳಿದರು.


    ಪ್ರತಿಭಟನೆಯಲ್ಲಿ ‘ಗೋ ಬ್ಯಾಕ್ ಮೋದಿ’ (ಮೋದಿಯವರು ವಾಪಸ್ ಹೋಗಿ) ಎಂಬ ಘೋಷಣೆ ಕೂಗಲಾಯಿತು.
    ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮುಖಂಡರಾದ ಕೆ.ಅಶ್ರ್, ನೀರಜ್ ಚಂದ್ರಪಾಲ್, ಹೇಮಂತ್ ಗರೋಡಿ, ಸಬಿತಾ ಮಿಸ್ಕಿತ್, ಕವಿತ ವಾಸು, ಶಾಂತಲ ಗಟ್ಟಿ, ಸವಾದ್ ಸುಳ್ಯ, ಸೌಹಾನ್ ಎಸ್.ಕೆ, ಸುಹಾನ್ ಆಳ್ವ ಮೊದಲಾದವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts