ಕೊಂಡಾಣ ದೇವಸ್ಥಾನದ ಸಿಸಿ ಕ್ಯಾಮರಾ ಕಳವು

Theft
Published on

ಉಳ್ಳಾಲ: ಇತಿಹಾಸ ಪ್ರಸಿದ್ಧ ಕೊಂಡಾಣ ಕ್ಷೇತ್ರಕ್ಕೆ ಅಳವಡಿಸಲಾಗಿದ್ದ ಆರು ಸಿಸಿ ಕ್ಯಾಮರಾಗಳು ಕಳವಾಗಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕೋಟೆಕಾರ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

ಕೊಂಡಾಣ ಕ್ಷೇತ್ರದ ಹಿಂದಿನ ವ್ಯವಸ್ಥಾಪನಾ ಸಮಿತಿ ದಾನಿಗಳ ನೆರವಿನಿಂದ ಕ್ಷೇತ್ರಕ್ಕೆ ತಾಗಿಕೊಂಡಿದ್ದ ಖಾಸಗಿ ಜಮೀನು ಖರೀದಿಸಿ ನೂತನ ಭಂಡಾರಮನೆ ನಿರ್ಮಿಸುತ್ತಿತ್ತು. ಮಾರ್ಚ್ 3ರಂದು ಕಿಡಿಗೇಡಿಗಳು ಜೆಸಿಬಿ ಬಳಸಿ ನಿರ್ಮಾಣ ಹಂತದಲ್ಲಿದ್ದ ಭಂಡಾರಮನೆಯ ಕಟ್ಟಡ ಕೆಡವಿದ್ದರು. ಈ ಘಟನೆ ನಡೆದ ತಿಂಗಳಲ್ಲೇ ಸಿಸಿ ಕ್ಯಾಮರಾ ಕಳವುಗೈಯ್ಯಲಾಗಿದೆ. ಕ್ಯಾಮರಾ ಕಳವುಗೈದ ಆರೋಪಿಯ ಚಹರೆ ಕ್ಷೇತ್ರದ ಕಚೇರಿಯಲ್ಲಿರುವ ಸಿಸಿ ಕ್ಯಾಮರಾದ ಡಿವಿಆರ್‌ನಲ್ಲಿ ಸೆರೆಯಾಗಿದ್ದು ಕೊಂಡಾಣ ನಿವಾಸಿ ಸುಭಾಶ್ ಶೆಟ್ಟಿ ಎಂದು ಹೇಳಲಾಗಿದೆ. ಈ ಕೃತ್ಯ ಗುರುವಾರ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net