ಮನೆಗೆ ಕನ್ನ ಹಾಕಿದ ಕಳ್ಳರ ಬಂಧನ

udp-theft
Published on

ಗುರುಪುರ: ಬಡಗ ಎಡಪದವಿನ ತಿಪ್ಲಬೆಟ್ಟು ಎಂಬಲ್ಲಿ ಬುಧವಾರ ಮನೆಗೆ ಕನ್ನ ಹಾಕಿ 1,40,000 ರೂ. ಬೆಲೆಬಾಳುವ ಸೊತ್ತು ಕಳವು ಮಾಡಿದ್ದ ಆರೋಪಿಗಳಿಬ್ಬರನ್ನು ಶುಕ್ರವಾರ ಬಜ್ಪೆ ಪೊಲೀಸರು ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ಬಂಧಿಸಿದ್ದಾರೆ.

ಮಂಗಳೂರು ತಾಲೂಕಿನ ಬಡಗ ಎಡಪದವು ಉರ್ಕಿಯಬೆಟ್ಟು ಜ್ವಾರ ಮನೆ ನಿವಾಸಿ ರವಿ ಶೆಟ್ಟಿ(55) ಮತ್ತು ಮೂಡುಬಿದಿರೆ ತೋಡಾರು ಗ್ರಾಮದ ಕಲ್ಲಸಂಕ ಶಿವಪ್ರಸಾದ್ ನಿಲಯದ ನಿವಾಸಿ ಶಿವಪ್ರಸಾದ್ ಶೆಟ್ಟಿ(29) ಬಂಧಿತರು. ಇವರಿಂದ ಸುಮಾರು 1,40,000 ರೂ. ಬೆಲೆಬಾಳುವ ಕೇಬಲ್, ಫ್ಯಾನ್, ಬಾಗಿಲು, ಕಿಟಕಿ ಮತ್ತಿತರ ಸೊತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನ ಆಗಿರುವ ಬಗ್ಗೆ ಮನೆ ಮಾಲೀಕ ಕೆ.ಯುವರಾಜ ಆಚಾರ್ಯ ಬಜ್ಪೆ ಠಾಣೆಯಲ್ಲಿ ದೂರು ನೀಡಿದ್ದರು. ಕಳ್ಳರ ಬಂಧನಕ್ಕಾಗಿ ಠಾಣಾಧಿಕಾರಿ ನಂದೀಶ್ವರ ಬಿ.ಕುಂಬಾರ ಪ್ರತ್ಯೇಕ ಪೊಲೀಸ್ ತಂಡ ರಚಿಸಿದ್ದರು. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಗುರಪ್ಪ ಕಾಂತಿ, ರೇವಣ ಸಿದ್ದಪ್ಪ, ರವಿ ಎನ್.ಎನ್., ಶೋಭಾ ಆರ್., ಎಎಸ್‌ಐ ರಾಮ ಪೂಜಾರಿ, ಸಿಬ್ಬಂದಿ ಸುಜನ್, ಪುರುಷೋತ್ತಮ, ರಶೀದ್, ದೇವಪ್ಪ ಹೊಸಮನೆ, ಬಸವರಾಜ ಪಾಟೀಲ್, ಪ್ರಕಾಶ್ ಚಿದಾನಂದ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net