ಜಿಲ್ಲೆ

ಕೈ ತಪ್ಪಿ ಹೋಗುತ್ತಿರುವ ಮಂಡ್ಯವನ್ನು ಬಿಗಿ ಮಾಡಿಕೊಳ್ಳಲು ಮುಂದಾದ ಎಚ್​​ಡಿಕೆ!

ಮಂಡ್ಯ: ಕೈ ತಪ್ಪಿ ಹೋಗುತ್ತಿರುವ ಮಂಡ್ಯವನ್ನು ಬಿಗಿ ಮಾಡಿಕೊಳ್ಳಲು ಮುಂದಾಗಿರುವ ಮಾಜಿ ಸಿಎಂ ಎಚ್​​.ಡಿ. ಕುಮಾರಸ್ವಾಮಿ ಅವರು ಮೊದಲ ಹೆಜ್ಜೆಯಾಗಿ ನಾಳೆ ನಾಗಮಂಗಲದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ.

ಮಂಡ್ಯದಲ್ಲಿ ಸಾಲು ಸಾಲು ಚುನಾವಣೆ ಸೋಲುಗಳಿಂದ ಜೆಡಿಎಸ್​ ಕಂಗೆಟ್ಟಿರುವ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್‌ಗೆ ಎಚ್​ಡಿಕೆ ಮುಂದಾಗಿದ್ದಾರೆ. ಈಗಾಗಲೆ ಲೋಕಸಭೆ, ಕೆ.ಆರ್‌. ಪೇಟೆ ವಿಧಾನಸಭೆ ಉಪಚುನಾವಣೆ, ಎಂಎಲ್‌ಸಿ ಚುನಾವಣೆಯಲ್ಲಿ ಜೆಡಿಎಸ್​ ಸೋತಿದೆ. ಹೀಗಾಗಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಹಿಡಿತ ಇಟ್ಟುಕೊಳ್ಳಲು ಜೆಡಿಎಸ್​ ಸಿದ್ಧತೆ ನಡೆಸಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲದಿಂದ ಚುನಾವಣೆ ಅಖಾಡ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಾಳೆ ನಾಗಮಂಗಲದಲ್ಲಿ ಜೆಡಿಎಸ್‌ನ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶ ಮೂಲಕ ಚಲುವರಾಯಸ್ವಾಮಿ‌ ಹಾಗೂ ಶಿವರಾಮೇಗೌಡಗೆ ಟಕ್ಕರ್ ಕೊಡಲು ಜೆಡಿಎಸ್​ ಸಿದ್ಧತೆ ಮಾಡಿಕೊಂಡಿದೆ.

ಈ ಹಿಂದಿನ ಚುನಾವಣೆಯಲ್ಲಿ ತೆರೆಯ ಹಿಂದೆ‌ ನಿಂತು ಜೆಡಿಎಸ್‌ ಸೋಲಿಗೆ ಚಲುವರಾಯಸ್ವಾಮಿ ಕಾರಣವಾಗಿದ್ದರು. ಜೆಡಿಎಸ್‌‌ನಿಂದ ಉಚ್ಚಾಟನೆ ಬಳಿಕ ಶಿವರಾಮೇಗೌಡ ರೆಬೆಲ್ ಆಗಿದ್ದಾರೆ. ಸಮಾವೇಶದಲ್ಲಿ 40 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಬಂದ ಜನರಿಗೆ ಬಾಡೂಟ ಹಾಕಿಸಲು ಸಿದ್ಧತೆ ನಡೆದಿದೆ. (ದಿಗ್ವಿಜಯ ನ್ಯೂಸ್​)