ಜಿಲ್ಲೆ

ಪತ್ನಿಯನ್ನು ಕೊಂದು ಠಾಣೆಗೆ ತೆರಳಿದ ಪತಿ ಶರಣಾಗುವ ಮುನ್ನ ಪೊಲೀಸರ ಮುಂದೆ ಹೇಳಿದ್ದಿಷ್ಟು...

ಬೆಂಗಳೂರು: ಅನೈತಿಕ ಸಂಬಂಧ ವಿಚಾರಕ್ಕೆ ದಂಪತಿ ನಡುವೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.

ಬನ್ನೇರುಘಟ್ಟ ಸಮೀಪದ ಕರಿಯಪನಹಳ್ಳಿ ನಿವಾಸಿ ಭಾರತಿ(32) ಕೊಲೆಯಾದ ಮಹಿಳೆ. ಪತಿ ರಘು(38) ಬಂಧಿತ.

ರಘು ಬನ್ನೇರುಘಟ್ಟದಲ್ಲಿ ಆಟೋ ಚಾಲಕನಾಗಿದ್ದ. ಪತ್ನಿ ಮೇಸ್ತ್ರಿಯೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಸಂಜೆ ಮನೆಯಲ್ಲಿ ದಂಪತಿ ನಡುವೆ ಜಗಳ ನಡೆದಿತ್ತು.

ಜಗಳ ತಾರಕಕ್ಕೇರಿದಾಗ ರಘು ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಬನ್ನೇರುಘಟ್ಟ ಠಾಣೆಗೆ ಆಗಮಿಸಿದ ಆರೋಪಿ ನಡೆದ ಎಲ್ಲ ಘಟನೆಯನ್ನು ಪೊಲೀಸರ ಮುಂದೆ ಹೇಳಿ ಶರಣಾಗಿದ್ದಾನೆ.

ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.