ಜಿಲ್ಲೆ

ಹುಬ್ಬಳ್ಳಿ ಘಟನೆ ಖೇದಕರ: ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಬೇಸರ

ಹೊಸಪೇಟೆ: ಹುಬ್ಬಳ್ಳಿಯಲ್ಲಿ ಹಿಂದು- ಮುಸ್ಲಿಂ ಘಟನೆ ನಡೆದು ಶಾಂತಿ ಕದಡುವ ಕೆಲಸ ನಡೆದಿರುವುದು ಖೇದಕರ ಎಂದು ಮಾಜಿ ಸಿಎಂ ಬಿ‌.ಎಸ್.ಯಡಿಯೂರಪ್ಪ ಖೇದ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಪ್ರಕರಣದಲ್ಲಿ ಆರೋಪಿಗಳೇ ಯಾರೇ ಇರಲಿ ತನಿಖೆ ಮಾಡಿ, ಅವರನ್ನು ಬಂಧಿಸಬೇಕು. ಕೋಮುವಾದ ನಿಯಂತ್ರಣಕ್ಕೆ ತರುವ ಕೆಲಸ ಪೊಲೀಸರು ಮಾಡಬೇಕು ಎಂದು ಹೇಳಿದರು.

ಶಾಂತಿ- ಸುವ್ಯವಸ್ಥೆ ತರುವ ಕೆಲಸವನ್ನು ನಮ್ಮ ಸರ್ಕಾರ ಖಂಡಿತವಾಗಿ ಮಾಡಲಿದೆ. ಈ ಹಿಂದೆ ನೀವು ಮುಖ್ಯಮಂತ್ರಿಗಳಿದ್ದಾಗ ಈ ತರಹದ ಸಮಸ್ಯೆಗಳಾಗುತ್ತಿರಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ತರ ಏನಿಲ್ಲ. ಈಗಿನ ಸಿಎಂ ಬೊಮ್ನಾಯಿ ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು‌.