More

    ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ: ಸಿಎಂ ಬೊಮ್ಮಾಯಿ‌ ಖಡಕ್ ಎಚ್ಚರಿಕೆ

    ಹೊಸಪೇಟೆ: ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಖಡಕ್ ಎಚ್ಚರಿಕೆ ನೀಡಿದರು

    ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಜಾಲತಾಣವೊಂದರಲ್ಲಿ ಪ್ರಚೋದನಾತ್ಮಕ ಸಂದೇಶ ಹಂಚಿಕೆ ಮಾಡಿದವರ ಬಂಧನವಾಗಿದೆ. ಕಾನೂನು ಕೈಗೆತ್ತಿಕೊಂಡಿದ್ದರಿಂದ ಈ ಘಟನೆ ಸಂಭವಿಸಿದೆ. ದುಷ್ಕೃತ್ಯ ಎಸಗಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ.

    ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದ್ದು, ಇಂತಹ ಕೃತ್ಯ‌ ಎಸಗಿದ ಸಂಘಟನೆಗಳನ್ನು ಪತ್ತೆ‌ ಹಚ್ಚುತ್ತೇವೆ. ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇದನ್ನು ಕರ್ನಾಟಕ ರಾಜ್ಯ ಸಹಿಸುವುದಿಲ್ಲ. ಇದಕ್ಕೆ ಮತ್ತೆ ಬೇರೆ ರೀತಿಯ ರಾಜಕೀಯ ಬಣ್ಣ ಬಳಿಯುವುದು ಬೇಡ. ಯಾರೇ ಘಟನೆಯಲ್ಲಿ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು. ಅಹಿತಕರ ಘಟನೆ ಸಂಭವಿಸಿದ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

    ಹುಬ್ಬಳ್ಳಿ ಘಟನೆ ಸಾಮರಸ್ಯ ಹಾಳು ಮಾಡುವ ಯತ್ನ: ಕೋಮು ದಳ್ಳುರಿ ಬೇಡವೆಂದು ಕುಮಾರಸ್ವಾಮಿ ಮನವಿ

    KGF-2 ಕನ್ನಡದ ಹೆಮ್ಮೆಯಲ್ಲ ಎನ್ನುತ್ತಲೇ ದಂಡುಪಾಳ್ಯ ಚಿತ್ರದ ಭಯಾನಕ ಉದಾಹರಣೆ ಕೊಟ್ಟ ಭಾಸ್ಕರ್​ ರಾವ್!​

    ಹಸ್ತಮೈಥುನದಿಂದ ಶ್ವಾಸಕೋಸದ ಪೊರೆ ಹರಿತ! 20ರ ಯುವಕನ ಎಕ್ಸ್​ರೇ ವರದಿಯಲ್ಲಿತ್ತು ಭಯಾನಕ ಅಂಶ

    ಮತ್ತೊಮ್ಮೆ ಸಾಮಾನ್ಯರ ಪಾಲಿನ ದೇವರಾದ ಸೂರ್ಯ: ಇದಲ್ಲವೇ ನಟನಿಗೆ ಇರಬೇಕಾದ ಸಾಮಾಜಿಕ ಕಳಕಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts