ಜಿಲ್ಲೆ

ಪತಿಯ ಮರ್ಮಾಂಗಕ್ಕೆ ಒದ್ದು ಕೊಲೆಗೈದ ಪತ್ನಿ: ಪ್ರಕರಣದಿಂದ ತಪ್ಪಿಸಿಕೊಳ್ಳಲು ಕಟ್ಟು ಕತೆ ಕಟ್ಟಿ ಸಿಕ್ಕಿಬಿದ್ದಳು!

ಹಾಸನ: ಪತಿಯನ್ನು ಕೊಲೆ ಮಾಡಿ ನಂತರ ಸಹಜ ಸಾವು ಎಂದು ನಾಟಕವಾಡಿದ್ದ ಖತರ್ನಾಕ್​ ಪತ್ನಿಯನ್ನು ಹೊಳೆನರಸೀಪುರದ ಹಳ್ಳಿ ಮೈಸೂರು ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 27ರ ರಾತ್ರಿ ಸುಕನ್ಯ ಎಂಬಾಕೆ ಕುಡಿದು ಬಂದ ತನ್ನ ಪತಿ ರೇವಣ್ಣನ ಜತೆ ಜಗಳಕ್ಕಿಳಿದಿದ್ದಳು. ಜಗಳ ತಾರಕ್ಕೇರಿದ ಬಳಿಕ ಪತಿಯ ಮರ್ಮಾಂಗಕ್ಕೆ ಒದ್ದು ಸಾಯಿಸಿದ್ದಳು. ಆದರೆ, ಬೆಳಗ್ಗೆ ತನ್ನ ಹೃದಯಾಘಾತದಿಂದ ಸಾವಿಗೀಡಾಗಿದ್ದಾನೆಂದು ನಾಟಕ ಆಡಿದ್ದಳು.

ಇವರಿಬ್ಬರ ಜಗಳಕ್ಕೆ ಇಬ್ಬರಿಗೂ ಇದ್ದ ಅಕ್ರಮ ಸಂಬಂಧವೂ ಕಾರಣವಾಗಿದೆ ಎಂದು ಹೇಳಲಾಗಿದೆ. ಸುಕನ್ಯಾ ಮತ್ತು ರೇವಣ್ಣ 8 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಆದರೆ ರೇವಣ್ಣ ಇನ್ನೊಂದು ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಮತ್ತು ಇದೆ ಕಾರಣಕ್ಕೆ ಕೆಲ ವರ್ಷ ಮನೆ ಬಿಟ್ಟು ಹೋಗಿದ್ದ. ಈ ವೇಳೆ ರೇವಣ್ಣ ಪತ್ನಿ ಕೂಡ ಇನ್ನೊರ್ವನ ಜತೆ ಅಕ್ರಮ ಸಂಬಂಧ ಹೊಂದಿದ್ದಳು.

ತುಂಬಾ ದಿನಗಳ ಬಳಿಕ ರೇವಣ್ಣ ಮರಳಿ ಮನೆಗೆ ಬಂದಾಗ ಸುಕನ್ಯ ರೇವಣ್ಣ ನಡುವೆ ಗಲಾಟೆ ನಡೆದಿದೆ. ಈ ವೇಳೆ ಆತನ ಮರ್ಮಾಂಗಕ್ಕೆ ಒದ್ದಿದ್ದರಿಂದ ರೇವಣ್ಣನ ಮೃತಪಟ್ಟಿದ್ದಾನೆ. ಈ ಸಂಬಂಧ ಹೊಳೆನರಸೀಪುರದ ಹಳ್ಳಿ ಮೈಸೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)