ಜಿಲ್ಲೆ

ನನಗೆ 3 ದಿನದಿಂದ ಮನಸ್ಸಿಗೆ ನೆಮ್ಮದಿಯಿಲ್ಲ... ಡೆತ್​ನೋಟ್ ಬರೆದಿಟ್ಟು ಸಾವಿನ ಹಾದಿ ಹಿಡಿದ SSLC ವಿದ್ಯಾರ್ಥಿನಿ

ಚಾಮರಾಜನಗರ: "ಅಪ್ಪ, ಅಮ್ಮ, ದೊಡ್ಡಪ್ಪ,‌‌ ದೊಡ್ಡಮ್ಮ,‌ ಅಜ್ಜಿ, ಮಾವ, ಎಲ್ಲರಿಗೂ ನನ್ನ ಕೊನೆಯ ವಂದನೆಗಳು. ನನಗೆ ಮೂರು ದಿನದಿಂದ ಮನಸ್ಸಿನಲ್ಲಿ ನೆಮ್ಮದಿ ಇಲ್ಲ. ಆದ್ದರಿಂದ ಸಾಯಲು ನಿಶ್ಚಯಿಸಿದ್ದೇನೆ. ನನ್ನನ್ನು ಕ್ಷಮಿಸಿ, ನನ್ನ ಸಾವಿಗೆ ನಾನೇ ಕಾರಣ.‌ ಮಿಸ್ ಯೂ ಆಲ್"...

ಇದು ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ನಿವಾಸಿ ಬಿಜೇಂದ್ರ ಮತ್ತು ವಿಜಯ ಪುತ್ರಿ, ಯಳಂದೂರು ಆದರ್ಶ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿನಿ ಮಮತ(16) ಬರೆದಿದ್ದಾರೆ ಎನ್ನಲಾದ ಡೆತ್ ನೋಟ್.

ಮಂಗಳವಾರ ರಾತ್ರಿ ಸ್ನಾನದ ಮನೆಯಲ್ಲಿ‌ ಸೀರೆ‌ಯಿಂದ ನೇಣುಬಿಗಿದುಕೊಂಡ ಆತ್ಮಹತ್ಯೆ ‌ಮಾಡಿಕೊಂಡಿರುವ ಸ್ಥಿತಿಯಲ್ಲಿ ಮಮತ ಮೃತದೇಹ ಪತ್ತೆಯಾಗಿದೆ. ಈಕೆಯ ಕೈಬರಹವಿರುವ ಪತ್ರ ಪೊಲೀಸರಿಗೆ ಸಿಕ್ಕಿದೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.