ಪಡುಮಲೆ ‘ಕೆಸರ್‌ಡ್ ಒಂಜಿ ದಿನ’ ಕಾರ್ಯಕ್ರಮಕ್ಕೆ ಶ್ರೀನಿವಾಸ ಭಟ್ ಚಂದುಕೂಡ್ಲು ಚಾಲನೆ ನೀಡಿದರು. ನಿಟ್ಟೆಗುತ್ತು ಪೇರಾಲು ಬಲರಾಜ್ ಶೆಟ್ಟಿ, ಮನೋಜ್ ರೈ ಪೇರಾಲು ಇತರರಿದ್ದರು. 
ಜಿಲ್ಲೆ

ಶ್ರದ್ಧಾಕೇಂದ್ರಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ : ಬಲರಾಜ್ ಶೆಟ್ಟಿ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಧರ್ಮದ ಆಚಾರ-ವಿಚಾರ ಮತ್ತು ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಅಗತ್ಯವಿದೆ ಎಂದು ನಿಟ್ಟೆಗುತ್ತು ಪೇರಾಲು ಬಲರಾಜ್ ಶೆಟ್ಟಿ ಹೇಳಿದರು.

ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆದ ಪ್ರಥಮ ವರ್ಷದ ‘ಕೆಸರ್‌ಡ್ ಒಂಜಿ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೈವ ನರ್ತಕ ಉಪನ್ಯಾಸಕ ಡಾ.ರವೀಶ್ ಪಡುಮಲೆ ಮಾತನಾಡಿದರು. ಸಮಿತಿ ಅಧ್ಯಕ್ಷ ಜನಾರ್ದನ ಪೂಜಾರಿ ಪದಡ್ಕ ಅಧ್ಯಕ್ಷತೆ ವಹಿಸಿದ್ದರು. ಕೂವೆ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ಚಾಲನೆ ನೀಡಿದರು.

ನಾರಾಯಣ ಭಟ್ ಬೀರ್ನೋಡಿ ಕ್ರೀಡಾಕೂಟ ಉದ್ಘಾಟಿಸಿದರು. ದೇವಸ್ಥಾನದ ಅರ್ಚಕ ಮಹಾಲಿಂಗ ಭಟ್ ಗದ್ದೆಗೆ ಹಾಲು ಬಾಗಿನ ಅರ್ಪಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ಪ್ರಮುಖರಾದ ಸತೀಶ್ ರೈ ಕಟ್ಟಾವು, ನಾಗೇಶ್ ಗೌಡ ಪುಳಿತ್ತಡಿ, ಮನೋಜ್ ರೈ ಪೇರಾಲು, ಗಂಗಾಧರ ರೈ ಮೇಗಿನಗುತ್ತು, ಉದ್ಯಮಿ ಸುಧಾಕರ ಶೆಟ್ಟಿ, ಶ್ರೀಧರ್ ಭಟ್ ಚಂದುಕೂಡ್ಲು, ಗಿರೀಶ್ ಕನ್ನಡ್ಕ, ಸ್ಥಳೀಯ ಶಂಕರಿ ಪಟ್ಟೆ, ಚಂದ್ರಶೇಖರ್ ಭಂಡಾರಿ ನಲಿಕೆಮಜಲು, ಲಿಂಗಪ್ಪ ಪೂಜಾರಿ ಮೈಯಾಳ, ರಾಮದಾಸ್ ಪೂಜಾರಿ ತಲೆಬೈಲು, ರಘುರಾಮ ಪಾಟಾಳಿ ಶರವು, ರಾಜೇಶ್ ರೈ ಮೇಗಿನಗುತ್ತು ಮತ್ತಿತರರು ಉಪಸ್ಥಿತರಿದ್ದರು.

ಸಮಿತಿಯ ಕಾರ್ಯದರ್ಶಿ ಸುರೇಶ್ ರೈ ಪಳ್ಳತ್ತಾರು ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧೆಗಳು ನಡೆದವು.