ವಿಜಯವಾಣಿ ಸುದ್ದಿಜಾಲ ಗೋಳಿಯಂಗಡಿ
ವಿದ್ಯಾರ್ಥಿಗಳಿಗೆ ಶೃಂಗೇರಿ ದೇವಳದಿಂದ ಮಧ್ಯಾಹ್ನದ ಉಚಿತ ಅನ್ನಪ್ರಸಾದ ವ್ಯವಸ್ಥೆ ಆಗಿರುವುದು ಪುಣ್ಯದ ಕಾರ್ಯ ಎಂದು ಗೋಳಿಯಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್.ಪ್ರಮೋದ್ ಹೆಗ್ಡೆ ಹಿಲಿಯಾಣ ಹೇಳಿದರು.
ಗೋಳಿಯಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೃಂಗೇರಿ ದೇವಳದಿಂದ ನೀಡಿದ ಮಧ್ಯಾಹ್ನದ ಉಚಿತ ಅನ್ನಪ್ರಸಾದ ವ್ಯವಸ್ಥೆಗೆ ಚಾಲನೆ ನೀಡಿ ವಾತನಾಡಿದರು.
ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ನಿವೃತ್ತ ಶಿಕ್ಷಕ ಅಣ್ಣಯ್ಯ ಶೆಟ್ಟಿ ಕಮ್ಗೋಳಿ, ಪತ್ರಕರ್ತ ಕೆ.ಸಂಜೀವ ಆರ್ಡಿ, ಹಳೇ ವಿದ್ಯಾರ್ಥಿ ರತ್ನಾಕರ ನಾಯ್ಕ ಗೋಳಿಯಂಗಡಿ, ಪ್ರೌಢ ಶಾಲೆ ಮುಖ್ಯ ಶಿಕ್ಷಕ ರಾವೇಂದ್ರ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ನಾಗರಾಜ ವೈದ್ಯ ಸ್ವಾಗತಿಸಿದರು. ಉಪನ್ಯಾಸಕ ಪ್ರಕಾಶ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಮಂಜುನಾಥ ಪಠಗಾರ ವಂದಿಸಿದರು.