ಜಿಲ್ಲೆ

ವಿಡಿಯೋಗ್ರಫಿ ಕಾರ್ಮಿಕರಿಂದ ಪ್ರತಿಭಟನೆ : ಚುನಾವಣಾ ಕರ್ತವ್ಯ ವೇತನ ಬಾಕಿ ಹಿನ್ನೆಲೆ

ಸೌಮ್ಯ ಆರ್

ಕಾಸರಗೋಡು: ಲೋಕಸಭೆ ಚುನಾವಣೆ ಸಂದರ್ಭ ಚುನಾವಣಾ ಆಯೋಗ ಶಿಫಾರಸಿನ ಮೇರೆಗೆ ವಿಡಿಯೋಗ್ರಫಿಯಲ್ಲಿ ತೊಡಗಿಸಿಕೊಂಡಿದ್ದ ಛಾಯಾಗ್ರಾಹಕ-ವಿಡಿಯೋಗ್ರಾಫಿಕ್ ಕಾರ್ಮಿಕರಿಗೆ ವೇತನ ನೀಡದಿರುವುದನ್ನು ವಿರೋಧಿಸಿ ಕೇರಳ ಫೊಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಯೂನಿಯನ್(ಸಿಐಟಿಯು) ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.

ಸಿಐಟಿಯು ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಗಿರಿ ಕೃಷ್ಣನ್ ಧರಣಿ ಉದ್ಘಾಟಿಸಿದರು. ಕಿಶೋರ್ ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಚುನಾವಣೆ ನಡೆದು ಹಲವು ತಿಂಗಳು ಕಳೆದರೂ, ವಿಡಿಯೋಗ್ರಾಫರ್‌ಗಳಿಗೆ ನಿಗದಿತ ವೇತನ ನೀಡದೆ ಜಿಲ್ಲಾಡಳಿತ ವಂಚನೆಯೆಸಗಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕೂಟದ ರಾಜ್ಯ ಖಜಾಂಚಿ ವಿ.ಸುರೇಶ್ ಮುಖ್ಯ ಭಾಷಣ ಮಾಡಿದರು. ಹರೀಶ್ ಕುಞಿಕೊಚ್ಚಿ, ಕೆ.ವಿ.ಕುಞಿಕೃಷ್ಣನ್, ನಾರಾಯಣನ್ ಉಪಸ್ಥಿತರಿದ್ದರು. ಧಿನು ಮೆಕ್ಕಾಟ್ ಸ್ವಾಗತಿಸಿದರು.