ರಸ್ತೆ ಬದಿ ಕಸ ಎಸೆದಾತನಿಗೆ ದಂಡ

Fine
Published on

ಸುಳ್ಯ: ಜಯನಗರದ ಕೊಯಿಂಗೋಡಿ-ಕುದ್ಪಾಜೆ ರಸ್ತೆ ಬದಿ ಕಸ ಎಸೆಯುತ್ತಿದ್ದಾತನನ್ನು ಸ್ಥಳೀಯರು ಹಿಡಿದು ಆತನಿಂದಲೇ ಕಸವನ್ನು ಹೆಕ್ಕಿಸಿ, ಕಸ ಎಸೆಯದಂತೆ ಎಚ್ಚರಿಕೆ ನೀಡಿದ ಘಟನೆ ಬುಧವಾರ ಸಂಜೆ ನಡೆದಿದೆ.

ಕೆಲ ಸಮಯಗಳಿಂದ ಜಯನಗರದ ಕೊಯಿಂಗೋಡಿ-ಕುದ್ಪಾಜೆ ರಸ್ತೆ ಬದಿ ಯಾರೋ ಕಸ ಎಸೆದು ಹೋಗುತ್ತಿದ್ದರು. ಇದನ್ನು ತಿಳಿಯಲು ಸ್ಥಳೀಯರು ಕಾದು ಕುಳಿತಿದ್ದರು. ಬುಧವಾರ ಸಂಜೆ ಕಸ ತೆಗೆದುಕೊಂಡು ಬಂದು ಬಿಸಾಡುತ್ತಿದ್ದ ಜಯನಗರ ಆಶ್ರಯ ಕಾಲನಿ ನಿವಾಸಿ ರಾಜೇಶ್ ಎಂಬಾತ ಕಸದ ಸಮೇತ ಸಿಕ್ಕಿಬಿದ್ದನೆನ್ನಲಾಗಿದೆ. ನಂತರ ಸುಳ್ಯ ಪೊಲೀಸ್ ಠಾಣೆಗೂ, ನಗರ ಪಂಚಾಯಿತಿಗೂ ವಿಷಯ ತಿಳಿಸಲಾಯಿತು. ನಗರ ಪಂಚಾಯಿತಿ ಕಸ ಎಸೆದಾತನಿಗೆ ದಂಡ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net