ಸುರೇಶ್ ಕೊಲೆಕಾಡಿ ಅವರಿಗೆ ಗೌರವ

gourva
Published on

ಮೂಲ್ಕಿ: ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಸಮಾಜದ ಎಲ್ಲರಿಗೂ ನ್ಯಾಯ ಒದಗಿಸಲು ಪ್ರಯತ್ನಿಸಿದರೆ ಜನ ಗುರುತಿಸುತ್ತಾರೆ ಎಂದು ಕಿಲ್ಪಾಡಿ ಗ್ರಾಪಂ ಅಧ್ಯಕ್ಷ ವಿಕಾಸ್ ಶೆಟ್ಟಿ ಹೇಳಿದರು.

ಕಿಲ್ಪಾಡಿ ಪಂಚಾಯಿತಿಯಲ್ಲ್ಲಿ 18 ವರ್ಷ ಕರ್ತವ್ಯ ನಿರ್ವಹಿಸಿ ಪದೋನ್ನತಿ ಹೊಂದಿ ಚೇಳಾಯರು ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡ ನೌಕರ ಸುರೇಶ್ ಕೊಲೆಕಾಡಿ ಅವರನ್ನು ಗ್ರಾಪಂ ವತಿಯಿಂದ ಗೌರವಿಸಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಗ್ರಾಪಂ ಉಪಾಧ್ಯಕ್ಷೆ ದಮಯಂತಿ ಶೆಟ್ಟಿಗಾರ್, ಸದಸ್ಯರಾದ ಗೋಪಿನಾಥ ಪಡಂಗ, ಲೀಲಾವತಿ, ರಾಜೇಶ್, ಮಮತಾ ಶೆಟ್ಟಿ, ದಿನೇಶ್, ಲಲಿತಾ ಯಾದವ್, ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ ಮಂಜುನಾಥ್, ಸಿಬ್ಬಂದಿ ಯತೀಶ್ ಕೊಲಕಾಡಿ, ತಾರಾನಾಥ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net