ಸುಳ್ಯ: ಕೋಲ್ಕತಾದ ಆರ್.ಜಿ.ಆರ್.ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆಯೊಬ್ಬರನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಸುಳ್ಯ ವೈದ್ಯರ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ವೈದ್ಯರಿಗೆ ರಕ್ಷಣೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಘ ಸುಳ್ಯ ಅಧ್ಯಕ್ಷೆ ಡಾ.ವೀಣಾ, ಗೌರವ ಕಾರ್ಯದರ್ಶಿ ಡಾ.ರವಿಕಾಂತ್, ಐಎಂಎ ಮತ್ತು ಎಎಂಎಸ್ ಕರ್ನಾಟಕ ಸ್ಟೇಟ್ ಚಾಪ್ಟರ್ ಮುಖ್ಯಸ್ಥೆ ಡಾ.ಗೀತಾ ದೊಪ್ಪ, ಡಾ.ರವಿಶಂಕರ್, ಡಾ.ವಿ.ಎಸ್ ಪಾರೆ, ಡಾ.ಹಿಮಕರ, ಡಾ.ಕರುಣಾಕರ ಕೆ.ವಿ., ಡಾ.ಅರ್ಚನಾ, ಡಾ.ವೆಂಕಟಕೃಷ್ಣ ಭಟ್, ಡಾ.ಸೌಮ್ಯಾ, ಡಾ.ಸಾಯಿಗೀತಾ, ಡಾ.ನವ್ಯಾ, ಡಾ.ರಂಗನಾಥ್, ಡಾ.ಭವ್ಯಾ, ಡಾ.ಹಸೀನಾ, ಡಾ.ಬೋರ್ಕರ್, ಡಾ.ರೋಶನ್, ಡಾ.ಗಣೇಶ್ ಶರ್ಮ ಇದ್ದರು.