

ಬಂಟ್ವಾಳ: ಸಂಸ್ಕಾರ ಉಳಿಸುವುದರೊಂದಿಗೆ ಸಶಕ್ತ, ಸದೃಢ, ತುಳು ಸಂಸ್ಕೃತಿ ಉಳಿಸುವ ಕಾರ್ಯ ಯುವ ಪೀಳಿಗೆಯಿಂದಾಗಬೇಕು. ಆರೋಗ್ಯ ವೃದ್ಧಿಗಾಗಿ ವರ್ಷಕ್ಕೊಮ್ಮೆಯಾದರೂ ಇಂಥ ಮಣ್ಣಿನ ಕ್ರೀಡೆ ನಡೆಸಿದಾಗ ಮಣ್ಣು ಮತ್ತು ಕೃಷಿಯ ಅವಿನಾಭವ ಬದುಕು ನಮ್ಮದಾಗುತ್ತದೆ ಎಂದು ಶ್ರೀ ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.
ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರ ಬಳಿಯ ಕೆಸರು ಗದ್ದೆಯಲ್ಲಿ ಭಾನುವಾರ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ ಕಂದೂರು, ಮಡಿವಾಳ ಯುವ ಬಳಗ ಮತ್ತು ಬಂಟ್ವಾಳ ಮಹಿಳಾ ಘಟಕ ಆಶ್ರಯದಲ್ಲಿ ದ.ಕ.ಜಿಲ್ಲಾ ಮಡಿವಾಳರ ಸಂಘ ಮಂಗಳೂರು ಸಹಕಾರದೊಂದಿಗೆ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆ ಮಡಿವಾಳ ಸಮಾಜದವರ ಕೆಸರ್ಡೊಂಜಿ ದಿನ-24 ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನಗೈದರು.
ದ.ಕ.ಜಿಲ್ಲಾ ಮಡಿವಾಳ ಸಂಘ ಅಧ್ಯಕ್ಷ ಬಿ.ಎನ್.ಪ್ರಕಾಶ್ ಸಭಾಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಉದಯ ಸಾಲಿಯಾನ್ ಅಜ್ಜಾಡಿ, ನಲ್ಲೂರು, ಧರ್ಮೇಂದ್ರ ಗಣೇಶಪುರ, ಸುಧಾಕರ ಪುತ್ರನ್, ಪ್ರವೀಣ್ ಎನ್.ಬಂಗೇರ ಹುಬ್ಬಳ್ಳಿ, ರಮೇಶ್ ಬಂಗೇರ, ಗುತ್ತಿಗೆದಾರ ಕೆ.ವಿಶ್ವನಾಥ್, ವಕೀಲ ಸದಾನಂದ ಸಾಲಿಯಾನ್, ಪುತ್ತೂರು ನಗರಸಭಾ ಸದಸ್ಯ ಪ್ರೇಮ್ ಕುಮಾರ್, ಸಂಘ ವಿವಿಧ ತಾಲೂಕು ಅಧ್ಯಕ್ಷರಾದ ಸತೀಶ್ ಕುಕ್ಕುಂದೂರು, ಕವಿತಾ ಹರೀಶ್ ವಾಲ್ಪಾಡಿ, ಶ್ರೀಧರ ಪಿಲಾತಬೆಟ್ಟು, ಸದಾಶಿವ ಹೊಸದುರ್ಗ, ಲೋಕೇಶ್ ಸುಳ್ಯ, ಸಂಪತ್ ಕೊಂಡಾಣ, ಬಂಟ್ವಾಳ ತಾ.ಮಡಿವಾಳ ಸ.ಸೇ.ಸಂಘದ ಗೌರವಾಧ್ಯಕ್ಷ ಎನ್.ಕೆ.ಶಿವ ನಂದಾವರ, ಯುವ ಬಳಗದ ಅಧ್ಯಕ್ಷ ಸಂದೇಶ್ ಕೊಯಿಲ, ಮಹಿಳಾ ಘಟಕ ಅಧ್ಯಕ್ಷ ಶೋಭಾ ಪಂಜಿಕಲ್ಲು ಇದ್ದರು.
ಬಂಟ್ವಾಳ ತಾ.ಮಡಿವಾಳ ಸ.ಸೇ.ಸಂಘದ ಗೌರವ ಸಲಹೆಗಾರ ಯೋಗೀಶ್ ಕಲಸಡ್ಕ ಸ್ವಾಗತಿಸಿ. ಉಪಾಧ್ಯಕ್ಷ ಪುಷ್ಪರಾಜ್ ಕುಕ್ಕಾಜೆ ಪ್ರಸ್ತಾವನೆಗೈದರು. ಅಧ್ಯಕ್ಷ ಹರೀಶ್ ಮಂಕಡೆ ವಂದಿಸಿ. ವೆಂಕಟೇಶ್ ಅನಂತಾಡಿ ನಿರೂಪಿಸಿದರು.
ಸಾಧಕರಾದ ಭಾರತೀಯ ಭೂಸೇನೆ ನಿವೃತ್ತ ಸುಬೇದಾರ್ ಜೂನಿಯರ್ ಕಮಿಷನರ್ ಆಫೀಸರ್ ಉಮೇಶ್ ಸಾಲಿಯಾನ್ ಹಿರಿಯಡ್ಕ, ಚಿತ್ರ ನಟ ಕಾಂತಾರ ಖ್ಯಾತಿಯ ಸನಿಲ್ಗುರು ಬಂಟ್ವಾಳ, ಬಾಸ್ಕೆಟ್ಬಾಲ್ ಕ್ರೀಡಾಪಡು ಸಂಕೇತ್ ಎಸ್. ಹೊಸಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಕೆಸರು ಗದ್ದೆಯಲ್ಲಿ ಕಂಬಳದ ಕೋಣ ಇಳಿಸುವ ಮೂಲಕ ವಿವಿಧ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.