ಜಿಲ್ಲೆ

ಸಮಾಜ, ದೇಶದ ಹಿತ ಕಾಪಾಡುವ ಕಾರ್ಯ

ಕುಂದಾಪುರ: ಶಿವಪೂಜೆ ಮತ್ತು ಶಿವ ಭಜನೆ ಒಂದು ದಿನದ್ದಲ್ಲ, ನಮ್ಮ ಜೀವನವೇ ಶಿವಪೂಜೆಯಾಗಬೇಕು. ಸಮಾಜದ, ದೇಶದ ಹಿತ ಕಾಪಾಡುವ ಕಾರ್ಯಗಳ ಮೂಲಕ ಸದಾ ಶಂಕರನನ್ನು ಆರಾಧಿಸಬೇಕು ಮತ್ತು ಅನುಸರಿಸಬೇಕು. ಅಂತಸಾಕ್ಷಿ ಸ್ವರೂಪದಲ್ಲಿದ್ದು ನಮ್ಮನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವವ ಶಿವ ಎಂದು ಸಂಸ್ಥೆ ಸಂಸ್ಕೃತ ಅಧ್ಯಾಪಕ ರಾಮಕೃಷ್ಣ ಉಡುಪ ಹೇಳಿದರು.

ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಮಹಾಶಿವರಾತ್ರಿಯನ್ನು ಶಾಸ್ತ್ರೋಕ್ತವಾಗಿ ಬುಧವಾರ ಆಚರಿಸಿ ಮಾತನಾಡಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲ ಶರಣ ಕುಮಾರ ಮಾತನಾಡಿದರು. ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಉಪಪ್ರಾಂಶುಪಾಲ ರಾಮ ದೇವಾಡಿಗ, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಭಕ್ತಿಗೀತಾ ಗಾಯನ, ಉಪವಾಸ, ಶಿವಸ್ತೋತ್ರ ಪಠಣ ಮಾಡಿದರು.