ಹೆಬ್ರಿ: ಡಾ.ಗುರುರಾಜ ಭಟ್ ಮೊದಲ ಬಾರಿಗೆ ತುಳುನಾಡಿನ ದೇವಾಲಯಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿದರು. ತುಳುನಾಡಿನ ದೇವಾಲಯಗಳನ್ನು ಊರಿನ ಜನರೇ ನಿರ್ಮಿಸಿದ್ದರು, ರಾಜರುಗಳು ನಿರ್ಮಿಸಿದ ದೇವಾಲಯಗಳು ಬಹಳ ಸೀಮಿತವಾಗಿದ್ದರಿಂದ ವೈಜಾನಿಕವಾಗಿ ಅಧ್ಯಯನಕ್ಕೆ ತೊಡಕಾಗಿದೆ. ಐತಿಹಾಸಿಕ ಸ್ಮಾರಕ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಮೂಡುಬಿದಿರೆ ಶ್ರೀ ಧವಳ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪ್ರಾಕ್ತನಶಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಪುಂಡಿಕಾಯ್ ಗಣಪತಿ ಭಟ್ ಹೇಳಿದರು.
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಸಹಯೋಗದೊಂದಿಗೆ ಇತಿಹಾಸ ವಿಭಾಗ ವತಿಯಿಂದ ತುಳುನಾಡಿನ ದೇವಾಲಯ ಸಂಸ್ಕೃತಿ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಎಸ್. ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಡಾ.ಪ್ರವೀಣ ಕುವಾರ್ ಎಸ್., ಐಕ್ಯೂಎಸಿ ಸಂಚಾಲಕ ಡಾ.ಗಣೇಶ ಎಸ್., ಇತಿಹಾಸ ವಿಭಾಗ ಉಪನ್ಯಾಸಕಿ ಸ್ವಪ್ನಾ ತಂತ್ರಿ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಅರುಣಾಚಲ ಕೆ.ಎಸ್. ಸ್ವಾಗತಿಸಿದರು. ಅಮರ್ ನಿರೂಪಿಸಿದರು. ಶ್ರೀಲತಾ ಅತಿಥಿಗಳನ್ನು ಪರಿಚಯಿಸಿದರು. ಶ್ವೇತಾ ವಂದಿಸಿದರು.