ಬೆಂಗಳೂರು: ಬಾಲಿವುಡ್ನಲ್ಲಿ ಪುತ್ರನಿಂದಾಗಿ ನಟ ಶಾರುಖ್ ಖಾನ್ಮುಜುಗರಕ್ಕೆ ಒಳಗಾದ ಪ್ರಸಂಗ ಇನ್ನೂ ಹಸಿಹಸಿಯಾಗಿರುವಾಗಲೇ ಸ್ಯಾಂಡಲ್ವುಡ್ನಲ್ಲಿ ಖ್ಯಾತ ನಿರ್ಮಾಪಕರೊಬ್ಬರ ಪುತ್ರನ ಪುಂಡಾಟ ಪ್ರಕರಣ ಬಹಿರಂಗಗೊಂಡಿದೆ. ನಟನೂ ಆಗಿರುವ ಈ ಪುತ್ರ ಯಾರದ್ದೋ ಮನೆಯ ಕೆಲಸದವರ ಮೇಲೆ ತನ್ನ ಸ್ನೇಹಿತರೊಂದಿಗೆ ಸೇರಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನ ಕ್ಲಬ್ ರಸ್ತೆಯಲ್ಲಿ ಇಂದು ಸಂಜೆ ಈ ಹಲ್ಲೆ ಪ್ರಕರಣ ನಡೆದಿದೆ. ಪ್ರತಿಷ್ಠಿತ ಖಾಸಗಿ ಶಾಲೆ ಮಾಲೀಕರ ಮನೆ ಕೆಲಸದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಉದ್ಯಮಿ ಮಂಜುಳಾ ಪುರುಷೋತ್ತಮ್ ಎಂಬವರ ಮನೆ ಕೆಲಸವರಾದ ನೀಲಮ್ಮ ಮತ್ತು ಅವರ ಪುತ್ರಿ ಅನುರಾಧಾ ಮೇಲೆ ಈ ನಟ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ವಿಮಾನದಲ್ಲೇ ಬಂದಿಳಿಯುತ್ತಿದ್ದರು, ಲಾಡ್ಜ್ನಲ್ಲೇ ತಂಗಿರುತ್ತಿದ್ದರು; ಆಮೇಲೆ ಈ ಇಬ್ಬರು ಮಾಡುತ್ತಿದ್ದುದು ಏನು ಗೊತ್ತಾ?
ಸಂಜೆ ನೀಲಮ್ಮ ಮತ್ತು ಅನುರಾಧಾ ಹೊರಗಡೆ ಮನೆ ಸ್ವಚ್ಛಗೊಳಿಸುತ್ತಿದ್ದಾಗ ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಮನೆ ಸಿಬ್ಬಂದಿಗೆ ಕಸ ತಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ಇದನ್ನೂ ಓದಿ: ಸಿಡಿಲ ಹೊಡೆತಕ್ಕೆ ತಲೆ ಸೀಳಿ ಹೋದರೂ ಬದುಕುಳಿದ ರೈತ; ಮತ್ತೊಂದೆಡೆ ಸಿಡಿಲಿನಿಂದಾಗಿ ಇಬ್ಬರು ಹಾಗೂ 13 ಕುರಿಗಳ ಸಾವು…
ಬಳಿಕ ಸೌಂದರ್ಯ ಜಗದೀಶ್ ಅವರ ಪುತ್ರ, ನಟನೂ ಆಗಿರುವ ಮಾಸ್ಟರ್ ಸ್ನೇಹಿತ್, ಆತನ ತಾಯಿ ರೇಖಾ ಜಗದೀಶ್ ಮತ್ತು ಭದ್ರತಾ ಸಿಬ್ಬಂದಿ ಸೇರಿ ಕೆಲಸದವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಈ ಥರ ಗಲಾಟೆ ಹೊಸದೇನಲ್ಲ. ಈ ಹಿಂದೆಯೂ ಮಾಸ್ಟರ್ ಸ್ನೇಹಿತ್ ಮತ್ತು ಸ್ನೇಹಿತರಿಂದ ಪುಂಡಾಟಿಕೆ ನಡೆದಿದ್ದು, ಇದು ಮೂರನೇ ಸಲ ಎನ್ನಲಾಗಿದೆ. ಈ ಪ್ರಕರಣ ಇದೀಗ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ.