ಕೊಕ್ಕರ್ಣೆ: ಸಾಹೇಬರಕಟ್ಟೆ ಮಹಾತ್ಮಗಾಂಧಿ ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ ಇತ್ತೀಚೆಗೆ ಜರುಗಿತು.ಕಾಜ್ರಳ್ಳಿಯ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಅಲ್ತಾರು ನಿರಂಜನ ಹೆಗ್ಡೆ ಉದ್ಘಾಟಿಸಿದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯ ವೈ.ಸಂಕಯ್ಯ ಶೆಟ್ಟಿ ಯಡ್ತಾಡಿ, ಉದ್ಯಮಿ ವಿಶ್ವನಾಥ ಶೆಟ್ಟಿ ಸಾಹೇಬರಕಟ್ಟೆ, ಮಂಜುನಾಥ ಆಚಾರ್ಯ ಯಡ್ತಾಡಿ, ಮಾಧವ ಹೆಗಡೆ ಮಧುವನ, ಶಾಲಾ ಆಡಳಿತ ಮಂಡಳಿ ಸದಸ್ಯ ರಮೇಶ್ ಶಿರಿಯಾರ, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಂ.ರವೀಂದ್ರನಾಥ ಕಿಣಿ ಮತ್ತಿತರರು ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಕೊಳ್ಕೆಬೈಲು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆ ಹಾಗೂ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ ಸಂಸ್ಥೆ ವಿದ್ಯಾರ್ಥಿಗಳಾದ ಪವಿತ್ರ, ಹುಲಿಗೆಪ್ಪ, ಪುನೀತ್, ಆಕಾಶ್ ಎ.ಶೆಟ್ಟಿ ಅವರನ್ನು ಗೌರವಿಸಲಾಯಿತು. ಶಿಕ್ಷಕ ಗಣೇಶ್ ನಾಯಕ್ ಸ್ವಾಗತಿಸಿದರು. ಡೈಸಿ ಡಿಸಿಲ್ವ ವಂದಿಸಿದರು. ಶಿಕ್ಷಕರಾದ ಸುಬ್ರಹ್ಮಣ್ಯ, ಯಶೋದಾ, ಗೀತಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಮುಖ್ಯ ಶಿಕ್ಷಕ ಸತೀಶ್ ನಾಯ್ಕ ವಾರ್ಷಿಕ ವರದಿ ಮಂಡಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿಜಯ್ ಕುಮಾರ್ ಶೆಟ್ಟಿ ನಿರೂಪಿಸಿದರು.