ಜಿಲ್ಲೆ

ಪಾಠದ ಜತೆ ಆಟಕ್ಕೆ ಆದ್ಯತೆ: ರಾಕೇಶ್ ಹೆಗ್ಡೆ ಸಲಹೆ

Avinash R

ಬೆಳ್ತಂಗಡಿ: ನಾರಾವಿ ವಲಯದ ಕ್ರೀಡಾಕೂಟ ಬಳಂಜ ಸ.ಉ.ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆಯಿತು. ಕ್ರೀಡಾಕೂಟದ ಅಧ್ಯಕ್ಷ ಪ್ರಮೋದ್ ಜೈನ್ ಉದ್ಘಾಟಿಸಿ ಶುಭ ಹಾರೈಸಿದರು.

ಅಳದಂಗಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಮಾತನಾಡಿ, ಮಕ್ಕಳು ಪಾಠದ ಜತೆ ಆಟಕ್ಕೆ ಆದ್ಯತೆ ನೀಡಬೇಕು. ಇಂದು ಭಾರತ ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯುತ್ತಿದೆ. ಮಕ್ಕಳು ಕೂಡ ನಿರಂತರ ತರಬೇತಿ ಪಡೆದು ರಾಷ್ಟ್ರೀಯಮಟ್ಟದಲ್ಲಿ ಬೆಳಗಬೇಕು ಎಂದರು.

ಬಳಂಜ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಮನೋಹರ್ ಬಳಂಜ, ಕಾರ್ಯದರ್ಶಿ ರತ್ನರಾಜ್ ಜೈನ್ ಪೇರಂದಬೈಲ್, ಟ್ರಸ್ಟಿಗಳಾದ ವಿನು ಬಳಂಜ, ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಲೋಚನಾ, ಮಹಿಳಾ ಮಂಡಲದ ಅಧ್ಯಕ್ಷೆ ಚೇತನಾ, ಬಳಂಜ ಅಮೃತ ಮಹೋತ್ಸವದ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ, ಸಿಆರ್‌ಪಿ ಕಿರಣ್ ಮತ್ತಿತರರು ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ರಂಗಸ್ವಾಮಿ ಸ್ವಾಗತಿಸಿದರು. ಶಿಕ್ಷಕಿ ಗ್ರೆಟ್ಟಾ ವಂದಿಸಿದರು. ಶಿಕ್ಷಕಿ ಶೈನಿ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.