ಬೆಳ್ತಂಗಡಿ: ಬಜಿರೆ ವಲಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಹೊಕ್ಕಾಡಿಗೋಳಿ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಹೊಕ್ಕಾಡಿಗೋಳಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಹುಲಿಮೇರು ಅಧ್ಯಕ್ಷತೆ ವಹಿಸಿದ್ದರು. ಆರಂಬೋಡಿ ಗ್ರಾಪಂ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು.
ಪಂಚಾಯಿತಿ ಉಪಾಧ್ಯಕ್ಷೆ ತೇಜಸ್ವಿನಿ, ಸದಸ್ಯರಾದ ಸತೀಶ್ ಪೂಜಾರಿ, ಪ್ರಭಾಕರ ಎಚ್, ಸುರೇಂದ್ರ, ರೋಟರಿ ಕ್ಲಬ್ ಲೊರೆಟೋ ಹಿಲ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ, ತಾಲೂಕು ಬಿಐಇಆರ್ ಟಿ.ಜಗದೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕೋಶಾಧಿಕಾರಿ ರಾಜೇಶ್ ನೆಲ್ಯಾಡಿ, ನಿಟ್ಟಡೆ ಕ್ಲಸ್ಟರ್ ಸಿಆರ್‌ಪಿ ಆರತಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್, ಉದ್ಯಮಿಗಳಾದ ಎಸ್ .ಮಹಮ್ಮದ್, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಕಾರ್ಯದರ್ಶಿ ಪದ್ಮನಾಭ ಕೋಟ್ಯಾನ್ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಲೊರೆಟೋ ಹಿಲ್ಸ್ ವತಿಯಿಂದ ಶಾಲಾ ಗೌರವ ಶಿಕ್ಷಕಿಯರ ಗೌರವಧನವನ್ನು ಶಾಲೆಗೆ ಹಸ್ತಾಂತರಿಸಲಾಯಿತು.
ಬಜಿರೆ ಕ್ಲಸ್ಟರ್ ಸಿಆರ್‌ಪಿ ರಾಜೇಶ್ ಸ್ವಾಗತಿಸಿದರು. ಹೊಕ್ಕಾಡಿಗೋಳಿ ಮುಖ್ಯ ಶಿಕ್ಷಕ ಸುಮಿತ್ರ ವಂದಿಸಿದರು. ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಅಧ್ಯಾಪಕ ವೃಂದ ಸಹಕರಿಸಿದರು. ಶಿಕ್ಷಕರಾದ ಸುಚಿತ್ರ ಹಾಗೂ ಮೆಟಿಲ್ಡಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ: ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಿಎಂಶ್ರೀ ಬಜಿರೆ ಶಾಲೆ ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.