ಪುಟಾಣಿಗಳು ಆಗಬೇಕಿದೆ ಸ್ಮಾರ್ಟ್: ಎಇಒ ಶಶಿಧರ ಎಂ ಹೇಳಿಕೆ

Bdk_Smart-Class
Published on

ಪೆರ್ಲ: ಸತ್ಯನಾರಾಯಣ ಎಎಲ್‌ಪಿ ಶಾಲೆ ನಾಲ್ಕನೇ ತರಗತಿಯನ್ನು ಅತ್ಯಾಧುನಿಕ ಸೌಲಭ್ಯದ ಪಠ್ಯ ಕೊಠಡಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕ್ಲಾಸ್ ರಕ್ಷ-ಶಿಕ್ಷಕ ಸಂಘದ ನೇತೃತ್ವದಲ್ಲಿ ಸ್ಮಾರ್ಟ್ ಕ್ಲಾಸ್‌ರೂಮ್ ನಿರ್ಮಿಸಿ ಉದ್ಘಾಟಿಸಲಾಯಿತು.

90 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಿದ ಸ್ಮಾರ್ಟ್ ತರಗತಿ ವ್ಯವಸ್ಥೆ ಎಲ್.ಪಿ. ಮಟ್ಟದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಚಾಲನೆಗೆ ಬಂದಿದೆ ಎಂದು ಸ್ಮಾರ್ಟ್‌ಕ್ಲಾಸ್ ಉದ್ಘಾಟಿಸಿದ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ್ ಎಂ. ತಿಳಿಸಿದರು. ನಾಲ್ಕನೇ ತರಗತಿ ರಕ್ಷಕರು ತಾವೇ ಸ್ವತಃ ಖರ್ಚು-ವೆಚ್ಚ ಭರಿಸಿ ಮುಖ್ಯ ಶಿಕ್ಷಕ, ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಇದನ್ನು ಕೊಡುಗೆಯಾಗಿಸಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಜ್ಯೋತಿ ಲಕ್ಷ್ಮೀ ಕಾಕುಂಜೆ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್., ಸ.ನಾ.ಫ್ರೌಢಶಾಲಾ ಮುಖ್ಯಶಿಕ್ಷಕ ಕೇಶವ ಪ್ರಕಾಶ್ ಎನ್., ಆಡಳಿತ ಸಮಿತಿ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ರಮೇಶ್ಚಂದ್ರ ರೈ ನಡುಬೈಲ್, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರವಿಚಂದ್ರ ಸೂರ್ಡೇಲು, ಕ್ಲಾಸ್ ಪಿಟಿಎ ಅಧ್ಯಕ್ಷರಾದ ಸುನಂದ ರೈ ಪೆರ್ಲ, ರಾಮಣ್ಣ ನಾಯ್ಕ ಬಜಕೂಡ್ಲು, ಶಾಲಾ ನಾಯಕಿ ದಿಯಾ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಗೋಪಾಲಕೃಷ್ಣ್ಣ ಭಟ್ ಕೋಟೆ ಸ್ವಾಗತಿಸಿದರು. ಉದಯ ಸಾರಂಗ್ ವಂದಿಸಿದರು. ಬೀವಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net